ಕರ್ನಾಟಕ

karnataka

ETV Bharat / city

ಶಿವಮೊಗ್ಗ: 24 ಗಂಟೆಗಳಲ್ಲಿ 163.40 ಮಿಮಿ ಮಳೆ, ಬಹುತೇಕ ಜಲಾಶಯಗಳು ಭರ್ತಿ - ಶಿವಮೊಗ್ಗ

ಶಿವಮೊಗ್ಗ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮಳೆ ಬಿಡುವಿನಲ್ಲಿ ಕೃಷಿ ಕೆಲಸಗಳು ಚುರುಕುಗೊಂಡಿದೆ.

Shivamogga rain
ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ

By

Published : Jul 9, 2022, 8:28 PM IST

ಶಿವಮೊಗ್ಗ :ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದ್ದು, ಭತ್ತದ ಸಸಿ ಮಡಿಗಳನ್ನು ಮಾಡಲು ರೈತರು ಗದ್ದೆಗಳಲ್ಲಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಮಳೆ ಬಿಡುವು ನೀಡಿದ ಕಡೆಗಳಲ್ಲಿ ಕೃಷಿ ಕಾರ್ಯಗಳು ಭರದಿಂದ ಸಾಗಿವೆ.

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ಲಿಂಗನಮಕ್ಕಿ ಜಲಾಶಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜನಲಾಶಯಕ್ಕೆ 47,968 ಕ್ಯೂಸೆಕ್ ಒಳಹರಿವುಇದೆ. ಡ್ಯಾಂ ನೀರಿನ ಮಟ್ಟ 1775.25 ಅಡಿಯಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, 28,061 ಕ್ಯೂಸೆಕ್ ಒಳಹರಿವು ಇದೆ. 168 ಅಡಿ 8 ಇಂಚು ನೀರು ಸಂಗ್ರಹವಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ ಬಹುತೇಕ ಜಲಾಶಯ ಭರ್ತಿ

ತುಂಗಾ ಜಲಾಶಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜಲಾಶಯಕ್ಕೆ 58,770 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂನಿಂದ 51,380 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಗರದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟಕ್ಕೇರಿದ್ದು, ಕೋರ್ಪಲಯ್ಯನ ಛತ್ರದ ತುಂಗಾ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 163.40 ಮಿಮಿ ಮಳೆಯಾಗಿದ್ದು, ಸರಾಸರಿ 23.24 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 291.57 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 9 ಮಿಮಿ., ಭದ್ರಾವತಿ 5.50 ಮಿಮಿ., ತೀರ್ಥಹಳ್ಳಿ 24.00 ಮಿಮಿ., ಸಾಗರ 59.40 ಮಿಮಿ., ಶಿಕಾರಿಪುರ 7.10 ಮಿಮಿ., ಸೊರಬ 14.30 ಮಿಮಿ. ಹಾಗೂ ಹೊಸನಗರ 33.70 ಮಿಮಿ. ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ:

ಜಲಾಶಯ ಗರಿಷ್ಠ ಇಂದಿನ ಮಟ್ಟ ಒಳಹರಿವು(ಕ್ಯೂಸೆಕ್​ನಲ್ಲಿ) ಹೊರಹರಿವು (ಕ್ಯೂಸೆಕ್​ನಲ್ಲಿ) ಕಳೆದ ವರ್ಷ ನೀರಿನ ಮಟ್ಟ
ಲಿಂಗನಮಕ್ಕಿ 1,819 1,775.25 47,968.00 2,137.19 1,783.75
ಭದ್ರಾ 186 168.8 28,016.00 146.00 155.9
ತುಂಗಾ 588.24 587.27 58,770.00 51,386.00 588.24

ಇದನ್ನೂ ಓದಿ:ರಾಜ್ಯದಲ್ಲಿ ಮುಂದಿನ 48 ಗಂಟೆ ಭಾರೀ ಮಳೆ...

ABOUT THE AUTHOR

...view details