ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ್ದು, ಕೂಡಲೇ ಹೊಸದಾಗಿ ರನ್‍ವೇ ಮೂರು ಅಲೈನ್‍ಮೆಂಟ್‍ಗಳ ಬಗ್ಗೆ ಸರ್ವೆ ಕಾರ್ಯವನ್ನು 10 ದಿನಗಳೊಳಗಾಗಿ ಮುಗಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸಲು ಸೂಚನೆ - ಅಲೈನ್‍ಮೆಂಟ್
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ್ದು, ಕೂಡಲೇ ಹೊಸದಾಗಿ ರನ್‍ವೇ ಮೂರು ಅಲೈನ್‍ಮೆಂಟ್‍ಗಳ ಬಗ್ಗೆ ಸರ್ವೆ ಕಾರ್ಯವನ್ನು 10 ದಿನಗಳೊಳಗಾಗಿ ಮುಗಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪ್ರಗತಿ ಪರಿಶೀಲನಾ ಸಭೆ
ಇನ್ನು ಶಿವಮೊಗ್ಗ-ಶಿಕಾರಿಪುರ-ರಾಣೀಬೆನ್ನೂರು-ಹಾವೇರಿ ಮಾರ್ಗವಾಗಿ ಹೊಸ ರೈಲ್ವೆ ಯೋಜನೆಯ ಕುರಿತು ಸಹ ಚರ್ಚಿಸಲಾಗಿದ್ದು, ಅವಶ್ಯಕತೆ ಇರುವ ಭೂ ಸ್ವಾಧೀನಾಧಿಕಾರಿಗಳ ಕಚೇರಿಯನ್ನು ಶಿಕಾರಿಪುರ ತಾಲೂಕಿನ ಕೇಂದ್ರ ಸ್ಥಾನದಲ್ಲಿ ತೆರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಭೆಯು ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರ ಸಮ್ಮುಖದಲ್ಲಿ ನಡೆದಿದ್ದು, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಪಿ.ಮಣಿವಣ್ಣನ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.