ಶಿವಮೊಗ್ಗ: ಹಿಜಾಬ್ ಸಂಬಂಧ ಕಳೆದ ವಾರ ಗಲಾಟೆಯಾದ ಹಿನ್ನೆಲೆಯಲ್ಲಿ ರಜೆ ಘೋಷಿಸಿದ್ದ ಜಿಲ್ಲೆಯ ಮೂರು ಕಾಲೇಜುಗಳು ಇಂದಿನಿಂದ ಆರಂಭವಾಗಿವೆ.
ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೀನಾಕ್ಷಿ ಭವನ ಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿಗಳು ನಡೆಯಲಿವೆ.
ಸರ್ಕಾರದ ಸೂಚನೆಯಂತೆ ನಿನ್ನೆಯಿಂದಲೇ ಎಲ್ಲ ಎಲ್ಲಾ ಕಾಲೇಜುಗಳು ಆರಂಭವಾಗಿದ್ದವು. ಆದ್ರೆ ಕಳೆದ ವಾರ ಈ ಕಾಲೇಜುಗಳಲ್ಲಿ ಭಾರಿ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಬುಧವಾರ ಕೂಡ ಈ ಕಾಲೇಜುಗಳಿಗೆ ರಜೆ ನೀಡಿತ್ತು. ಇಂದು ಭದ್ರತೆಯೊಂದಿಗೆ ಈ ಕಾಲೇಜುಗಳನ್ನು ಆರಂಭಿಸಲಾಗಿದೆ.
ನಿಷೇಧಾಜ್ಞೆ ಜಾರಿ: ಜಿಲ್ಲೆಯ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಡಿಸಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳ ಸುತ್ತಮುತ್ತ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: 'ನಮಗೆ ಹಿಜಾಬ್ ಮುಖ್ಯ': ವಿಜಯಪುರದಲ್ಲಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು