ಕರ್ನಾಟಕ

karnataka

ETV Bharat / city

ಭದ್ರಾವತಿ : ಈಜಲು ಹೋದ ಗೆಳೆಯರು ನೀರುಪಾಲು - ಯುವಕರು ಮುಳುಗಿ ಸಾವು

ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ನಂತರ ಭದ್ರಾವತಿಯ ಅಗ್ನಿಶಾಮಕದಳದವರು ಬಂದು ಇಬ್ಬರ ಶವವನ್ನು ಹೊರ ತೆಗೆದಿದ್ದಾರೆ..

youth died
youth died

By

Published : Sep 4, 2021, 8:23 PM IST

ಶಿವಮೊಗ್ಗ :ಗೆಳೆಯರೊಂದಿಗೆ ಈಜಲು ಹೋದ ಇಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭದ್ರಾವತಿಯ ಗೊಂದಿ ಗ್ರಾಮದ ಬಳಿ ನಡೆದಿದೆ. ಭದ್ರಾವತಿ ತಾಲೂಕಿನ ಗೊಂದಿ ಬಳಿ ಹರಿಯುವ ಭದ್ರಾ ನದಿಯಲ್ಲಿ ಈಜಲು ಹೋದ ಕೊಮ್ಮನಾಳು ಗ್ರಾಮದ ಶಶಾಂಕ್(26) ಹಾಗೂ ಗಾಡಿಕೊಪ್ಪದ ನಿವಾಸಿ ಕಿರಣ್ (24) ಮೃತ ಯುವಕರು.

ಶಿವಮೊಗ್ಗದಿಂದ ಐದು ಜನ ಸ್ನೇಹಿತರು ಬೈಕ್​​ನಲ್ಲಿ ಈಜಲು ಗೊಂದಿ ಬಳಿ ತೆರಳಿ, ನೀರಿನಲ್ಲಿ ಈಜಲು ಹೋಗಿದ್ದರು. ಆದರೆ, ಶಶಾಂಕ್ ಹಾಗೂ ಕಿರಣ್​​ಗೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ನಂತರ ಭದ್ರಾವತಿಯ ಅಗ್ನಿಶಾಮಕದಳದವರು ಬಂದು ಇಬ್ಬರ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details