ಶಿವಮೊಗ್ಗ: ವಿದ್ಯುತ್ ಅವಘಡಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ನಗರದ ಸೂಗೂರು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ: ವಿದ್ಯುತ್ ಅವಘಡಕ್ಕೆ ಯುವಕ ಬಲಿ - ಶಾಕ್ ನಿಂದ ಯುವಕ ಜ್ಞಾನೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ
ವಿದ್ಯುತ್ ಅವಘಡಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ನಗರದ ಸೂಗೂರು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ: ವಿದ್ಯುತ್ ಅವಘಡಕ್ಕೆ ಯುವಕ ಬಲಿ
ಸೂಗೂರಿನ ನಿವಾಸಿ ಜ್ಞಾನೇಂದ್ರ (21) ಎಂಬಾತನೇ ವಿದ್ಯುತ್ ಶಾಕ್ಗೆ ಬಲಿಯಾದ ಯುವಕ. ಜ್ಞಾನೇಂದ್ರ ಸೂಗೂರಿನ ಜೆಡಿಎಸ್ ನಾಯಕ ಮಲ್ಲಿಕಾರ್ಜುನ್ ಅವರ ಪುತ್ರನಾಗಿದ್ದು, ಮನೆಯಲ್ಲಿ ಟೈಲ್ಸ್ ಕೆಲಸ ನಡೆಯುತ್ತಿದ್ದು ವಿದ್ಯುತ್ ಸಂಪರ್ಕ ತಪ್ಪಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಶಾಕ್ನಿಂದ ಯುವಕ ಜ್ಞಾನೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.