ಕರ್ನಾಟಕ

karnataka

ETV Bharat / city

ಶಿವಮೊಗ್ಗ: ಮಂಗಳವಾರದ ಮಳೆ ಪ್ರಮಾಣ ಎಷ್ಟು? - ಇಂತಿದೆ ಜಲಾಶಯಗಳ ನೀರಿನ ಮಟ್ಟ - ಶಿವಮೊಗ್ಗದ ಮಂಗಳವಾರದ ಮಳೆ ಪ್ರಮಾಣ

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 37.20 ಮಿಮಿ ಮಳೆಯಾಗಿದೆ. ಲಿಂಗನಮಕ್ಕಿ, ಭದ್ರಾ, ತುಂಗಾ ಜಲಾಶಯಗಳ ನೀರಿನ ಮಟ್ಟ ಈ ಕೆಳಗಿನಂತಿದೆ..

ಜಲಾಶಯಗಳ ನೀರಿನ ಮಟ್ಟದ ಮಾಹಿತಿ
ಜಲಾಶಯಗಳ ನೀರಿನ ಮಟ್ಟದ ಮಾಹಿತಿ

By

Published : Jul 19, 2022, 10:12 PM IST

ಶಿವಮೊಗ್ಗ:ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳಿಗೆ ಹೆಚ್ಚಿನ ನೀರು ಬಂದಿದೆ. ಜಲಾಶಯಗಳ ಮಟ್ಟದಲ್ಲಿ ಏರಿಕೆ ಆಗಿದೆ. ಇನ್ನು ಕೃಷಿ ಚಟುವಟಿಕೆಗಳು ಕೂಡ ಮಲೆನಾಡಿನಲ್ಲಿ ಚುರುಕಾಗಿದೆ.

ಮಳೆ ಪ್ರಮಾಣ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 37.20 ಮಿಮಿ ಮಳೆಯಾಗಿದ್ದು, ಸರಾಸರಿ 5.31 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 615.86 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 2.50 ಮಿಮಿ., ಭದ್ರಾವತಿ 3.30 ಮಿಮಿ., ತೀರ್ಥಹಳ್ಳಿ 9.90 ಮಿಮಿ., ಸಾಗರ 8.20 ಮಿಮಿ., ಶಿಕಾರಿಪುರ 2.80 ಮಿಮಿ., ಸೊರಬ 5.10 ಮಿಮಿ. ಹಾಗೂ ಹೊಸನಗರ 5.40 ಮಿಮಿ. ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್​​ಗಳಲ್ಲಿ:

ಲಿಂಗನಮಕ್ಕಿ: 1819 (ಗರಿಷ್ಠ), 1795.6 (ಇಂದಿನ ಮಟ್ಟ), 41,604.00 (ಒಳಹರಿವು), 4799.17 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1791.2

ಭದ್ರಾ: 186 (ಗರಿಷ್ಠ), 182.3 (ಇಂದಿನ ಮಟ್ಟ), 33891.00 (ಒಳಹರಿವು), 33301.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 163.0

ತುಂಗಾ: 588.24 (ಗರಿಷ್ಠ), 588.02 (ಇಂದಿನ ಮಟ್ಟ), 44497.00 (ಒಳಹರಿವು), 40678.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.

ಜಿಲ್ಲೆಯಲ್ಲಿ ಒಟ್ಟಾರೆ 9 ಧನ - ಕರುಗಳು ಸಾವಿಗೀಡಾಗಿವೆ. 258 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 866 ವಿದ್ಯುತ್ ಕಂಬ,16 ವಿದ್ಯುತ್ ಟ್ರಾನ್ಸ್​​ಫಾರ್ಮರ್​ಗಳಿಗೆ ಹಾನಿಯಾಗಿದೆ. ಒಟ್ಟು 566 ಮನೆಗಳಲ್ಲಿ 35 ಸಂಪೂರ್ಣ, 411 ಭಾಗಶಃ ಹಾಗೂ 120 ಮನೆಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ABOUT THE AUTHOR

...view details