ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರದ ನೂತನ ವೈದ್ಯಕೀಯ ಕಾಯ್ದೆ .. ಒಪಿಡಿ ಬಂದ್ ಮಾಡಿ ಖಾಸಗಿ ಆಸ್ಪತ್ರೆಗಳ ಪ್ರತಿಭಟನೆ - doctor's protest in shimoga

ಈ ಬಾರಿ ನಡೆದ ಲೋಕಸಭೆಯ ಅಧಿವೇಶ​​ನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ-2019ರ ವಿಧೇಯಕವನ್ನು ಮಂಡನೆ ಮಾಡಿದ್ದು, ಇದನ್ನು ವಿರೋಧಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿವೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್

By

Published : Jul 31, 2019, 1:50 PM IST

ಶಿವಮೊಗ್ಗ: ಕೇಂದ್ರ ಸರ್ಕಾರದ ನೂತನ ವೈದ್ಯಕೀಯ ಕಾಯ್ದೆಯು ಖಾಸಗಿ ಆಸ್ಪತ್ರೆಗಳಿಗೆ ಮಾರಕವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನೂ 24 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಬಾರಿ ನಡೆದ ಲೋಕಸಭೆಯ ಅಧಿವೇಶ​​ನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ-2019ರ ವಿಧೇಯಕವನ್ನು ಮಂಡನೆ ಮಾಡಿದೆ. ಈ ವಿಧೇಯಕವನ್ನು ರಾಷ್ಟ್ರೀಯ ವೈದ್ಯರ ಸಂಘ ವಿರೋಧ ಮಾಡಿದ್ದರೂ ಸಹ ಇದನ್ನು ಕೇಂದ್ರ ಮಂಡನೆ ಮಾಡಿದ್ದು, ಸಂಸತ್​ನಲ್ಲಿ ಅನುಮೋದನೆ ಸಹ ಆಗಿದೆ. ಇದನ್ನು ವಿರೋಧಿಸಿ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆಯ ತನಕ ಒಟ್ಟು‌ 24 ಗಂಟೆಗಳ ಕಾಲ ಒಪಿಡಿ ಸೇವೆ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್..

ಹೊಸ ಕಾಯ್ದೆಯು ಜನ ವಿರೋಧಿಯಾಗಿದ್ದು, ವೈದ್ಯಕೀಯ ಶಿಕ್ಷಣದ ದಿಕ್ಕನ್ನೆ ಬದಲಿಸುವ ಕೆಲ ಅಂಶಗಳನ್ನು ಹೊಂದಿದೆ. ಈವರೆಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇದ್ದ ನಿಯಂತ್ರಣಗಳನ್ನು ಕಳಚಿ, ಎಲ್ಲೆಂದರಲ್ಲಿ ವೈದ್ಯಕೀಯ ಕಾಲೇಜುಗಳು ತೆರೆಯಬಹುದಾಗಿದೆ. ಇದರಿಂದ ಬೇಕಾ ಬಿಟ್ಟಿ ದರಕ್ಕೆ ವೈದ್ಯಕೀಯ‌ ಸೀಟನ್ನು ಮಾರಾಟ ಮಾಡಬಹುದಾಗಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಕುಂಠಿತಗೊಳಿಸುವ ಎಲ್ಲಾ ಅವಕಾಶಗಳಿಗೂ ಎಡೆ ಮಾಡಿಕೊಟ್ಟಂತಾಗುತ್ತದೆ ಎಂಬುದು ಪ್ರತಿಭಟನಾನಿರತ ವೈದ್ಯರ ಆರೋಪ.

ಇದಲ್ಲದೆ, ನರ್ಸಿಂಗ್, ದಂತ ವೈದ್ಯಕೀಯ, ಫಾರ್ಮಸಿಯಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಮಧ್ಯದಲ್ಲಿ ಸೇರಿಕೊಳ್ಳುವ ಅವಕಾಶ ನೀಡಲಾಗಿದೆ. ಸಂವಿಧಾನ ಬದ್ಧ ವೈದ್ಯಕೀಯ ರಂಗದ ಸ್ವಯಂ ಆಡಳಿತವನ್ನು ಕಿತ್ತು ಕೊಂಡು ಸರ್ಕಾರವೇ ಈ ಕೆಲಸವನ್ನು ನಿಯಂತ್ರಿಸುವಂತೆ ಮಾಡುವ ಮಸೂದೆ ಇದಾಗಿದೆ ಎಂದು ಖಾಸಗಿ‌ ಆಸ್ಪತ್ರೆಯವರು ತಮ್ಮ ಒಪಿಡಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ನಗರದ ಪ್ರಮುಖ ಆಸ್ಪತ್ರೆಗಳಾದ ಸರ್ಜಿ‌ ಹಾಸ್ಪಿಟಲ್, ಆಸ್ಪತ್ರೆ, ನಂಜಪ್ಪ, ಮೆಟ್ರೋ‌ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ‌ಸುಮಾರು‌ 250ಕ್ಕೂ ಹೆಚ್ಚು ಆಸ್ಪತ್ರೆ, ಕ್ಲಿನಿಕ್​​ಗಳನ್ನು ಬಂದ್ ಮಾಡಲಾಗಿದೆ.

ABOUT THE AUTHOR

...view details