ಕರ್ನಾಟಕ

karnataka

ETV Bharat / city

ಕಲುಷಿತ ನೀರು ಸರಬರಾಜು ಮಾಡಿದ ಶಿವಮೊಗ್ಗ ಪಾಲಿಕೆ: ಸ್ಥಳೀಯರಿಂದ ಹಿಡಿಶಾಪ - ಬಡಾವಣೆಯ ನಾಲ್ಕನೇ ತಿರುವಿನ ಗಿರಿಮಾಜಿ ಮನೆ

ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಜನರಿಗೆ ಮಾತ್ರ ನೀರು ಸರಬರಾಜು ಮಂಡಳಿಯವರು ಕಲುಷಿತ ನೀರು ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

kn_smg_02_darty_Watar_7204213.
ಕಲುಷಿತ ನೀರು ಸರಬರಾಜು ಮಾಡಿದ ಶಿವಮೊಗ್ಗ ಪಾಲಿಕೆ: ಹಿಡಿಶಾಪ ಹಾಕಿದ ನಿವಾಸಿಗಳು

By

Published : Nov 27, 2019, 7:21 PM IST

ಶಿವಮೊಗ್ಗ:ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಜನರಿಗೆ ಮಾತ್ರ ನೀರು ಸರಬರಾಜು ಮಂಡಳಿಯವರು ಕಲುಷಿತ ನೀರು ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಲುಷಿತ ನೀರು ಸರಬರಾಜು ಮಾಡಿದ ಶಿವಮೊಗ್ಗ ಪಾಲಿಕೆ: ಹಿಡಿಶಾಪ ಹಾಕಿದ ನಿವಾಸಿಗಳು

ನಗರದ ಪಾರ್ಕ್ ಬಡಾವಣೆಯಲ್ಲಿ ನಾಲ್ಕೈದು ದಿನಗಳಿಂದ ಕಲುಷಿತ ನೀರನ್ನು ನೀರು ಸರಬರಾಜು ಮಂಡಳಿ ಪೊರೈಸುತ್ತಿದೆ. ಬಡಾವಣೆಯ ನಾಲ್ಕನೇ ತಿರುವಿನ ಗಿರಿಮಾಜಿ ಮನೆ ರಸ್ತೆಯಲ್ಲಿ ಕಲುಪಿತ, ಕೆಟ್ಟ ವಾಸನೆಯ ನೀರು ಪೊರೈಕೆ ಮಾಡಲಾಗುತ್ತಿದೆ. ಈ ಭಾಗದ ಪ್ರತಿ ಮನೆಯಲ್ಲೂ ಇದೇ ನೀರು ಪೊರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು‌, ಸ್ನಾನ ಮಾಡಲೂ ಬರಲ್ಲ. ಅಲ್ಲದೆ ಮನೆ ಬಳಕೆಗೂ ಬಾರದ ಸ್ಥಿತಿಯಲ್ಲಿ ನೀರು ಕಲುಷಿತವಾಗಿದೆ ಎನ್ನಲಾಗಿದೆ. ಕಳೆದ ಮೂರಾಲ್ಕು ದಿನಗಳಿಂದ ಈ ಭಾಗದ ಜನ ಕುಡಿಯುವ ನೀರಿನ ಕ್ಯಾನ್ ಹಾಕಿಸಿಕೊಂಡು ಬಳಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆಯವರಿಗೆ ದೂರು ನೀಡಿದ ತಕ್ಷಣ ಕುಡಿಯುವ ನೀರಿನ ಪೈಪ್​​ಗೆ ಕಲುಷಿತ ನೀರು ಎಲ್ಲಿಂದ ಬಂದು ಸೇರುತ್ತಿದೆ ಎಂಬುದನ್ನು ಹುಡುಕುವ ಕಾರ್ಯ ನಡೆಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ಪಾಲಿಕೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ.

ABOUT THE AUTHOR

...view details