ಕರ್ನಾಟಕ

karnataka

ETV Bharat / city

ಕೊರೊನಾ ಎಫೆಕ್ಟ್: ಶಿವಮೊಗ್ಗದಲ್ಲಿ ಒಂದೇ ದಿನಕ್ಕೆ ನಿಮಜ್ಜನಗೊಂಡ ಗಣಪ - ಶಿವಮೊಗ್ಗ ಗಣೇಶ ವಿಸರ್ಜನೆ

ಹಿಂದೂ ಮಹಾ ಮಂಡಲದ ಗಣೇಶನನ್ನು ಪ್ರತಿ ವರ್ಷದ 12 ದಿನ ಪ್ರತಿಷ್ಠಾಪಿಸಿ ಅನಂತ ಚತುರ್ಥಿ ದಿನದಂದು ನಿಮಜ್ಜನ ಮಾಡಲಾಗುತ್ತಿತ್ತು. ಈ ಗಣೇಶನನ್ನು ಸಹ ಇಂದು ರಾತ್ರಿ ತುಂಗಾ ನದಿಯ ಭೀಮನ ಮಡುವಿನಲ್ಲಿ‌ ಶಾಂತಿಯುತವಾಗಿ ನಿಮಜ್ಜನ ಮಾಡಲಾಯಿತು.‌

ಕೊರೊನಾ ಎಫೆಕ್ಟ್: ಒಂದೇ ದಿನಕ್ಕೆ ನಿಮಜ್ಜನಗೊಂಡ ಗಣಪ
ಕೊರೊನಾ ಎಫೆಕ್ಟ್: ಒಂದೇ ದಿನಕ್ಕೆ ನಿಮಜ್ಜನಗೊಂಡ ಗಣಪ

By

Published : Aug 23, 2020, 12:56 AM IST

ಶಿವಮೊಗ್ಗ: ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಗಣೇಶ ಉತ್ಸವ ಆಚರಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದ ಹಿನ್ನೆಲೆ ನಗರದಲ್ಲಿ ಒಂದೇ ದಿನಕ್ಕೆ ಬಹಳಷ್ಟು ಗಣಪಗಳು ನಿಮಜ್ಜನಗೊಂಡವು.

ಕೊರೊನಾದಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ನಿರ್ಬಂಧ ಹಾಕಿದ ಕಾರಣ ಸಂಪ್ರದಾಯ ಬದ್ದವಾಗಿ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದ ಗಣೇಶಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಇದರಿಂದ ಶಿವಮೊಗ್ಗದ ಗಲಾಟೆ ಗಣಪ ಹಾಗೂ ರಾಮಣ್ಣ ಶ್ರೇಷ್ಟಿ ಪಾರ್ಕ್ ಗಣಪಗಳು ಸಹ ಇಂದೇ ನಿಮಜ್ಜನಗೊಂಡರೆ, ಬಸವೇಶ್ವರ ದೇವಾಲಯದ ಗಣೇಶ ಭಾನುವಾರ ಬೆಳಗ್ಗೆ 10 ಗಂಟೆಗೆ ನಿಮಜ್ಜನವಾಗಲಿದೆ.

ಕೊರೊನಾ ಎಫೆಕ್ಟ್: ಒಂದೇ ದಿನಕ್ಕೆ ನಿಮಜ್ಜನಗೊಂಡ ಗಣಪ
ಶಾಂತಿಯುತವಾಗಿ ನಿಮಜ್ಜನಗೊಂಡ ಹಿಂದೂ ಮಹಾ ಮಂಡಲ ಗಣೇಶ:ಹಿಂದೂ ಮಹಾ ಮಂಡಲದ ಗಣೇಶನನ್ನು ಪ್ರತಿ ವರ್ಷದ 12 ದಿನ ಪ್ರತಿಷ್ಠಾಪಿಸಿ ಅನಂತ ಚತುರ್ಥಿ ದಿನದಂದು ನಿಮಜ್ಜನ ಮಾಡಲಾಗುತ್ತಿತ್ತು. ಈ ಗಣೇಶನನ್ನು ಸಹ ಇಂದು ರಾತ್ರಿ ತುಂಗಾ ನದಿಯ ಭೀಮನ ಮಡುವಿನಲ್ಲಿ‌ ಶಾಂತಿಯುತವಾಗಿ ನಿಮಜ್ಜನ ಮಾಡಲಾಯಿತು.‌

ಪ್ರತಿ ವರ್ಷ ಈ ಗಣಪತಿಯ ನಿಮಜ್ಜನ ಮೆರವಣಿಗೆಗೆ ಲಕ್ಷಾಂತರ ಮಂದಿ ಜಮಾವಣೆಯಾಗುತ್ತಿದ್ದರು. ಈ ವೇಳೆ ಕೊರೊನಾದಿಂದ ಜನ ಸಹ ಆಗಮಿಸಿರಲಿಲ್ಲ. ಪೊಲೀಸ್ ಇಲಾಖೆಯು ಸೂಕ್ತ ಬಂದೋ ಬಸ್ತ್​​ನಲ್ಲಿ ನಿಮಜ್ಜನ ಪೂರೈಸಿದರು. ಇನ್ನು ಮನೆಯಲ್ಲಿ ಕೂರಿಸಿದ ಗಣೇಶಗಳನ್ನು ಸಹ ನದಿಯಲ್ಲಿ ನಿಮಜ್ಜನ ಮಾಡಲಾಯಿತು.

ABOUT THE AUTHOR

...view details