ಶಿವಮೊಗ್ಗ:ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದುಜಿಲ್ಲಾಧಿಕಾರಿ ಕೆ.ಎ ದಯಾನಂದ ಭೇಟಿ ನೀಡಿದರು.
ರಿಪ್ಪನ್ಪೇಟೆ ಶಾಲಾ ಕಟ್ಟಡ ಶಿಥಿಲ: ತೆರವಿಗೆ ಜಿಲ್ಲಾಧಿಕಾರಿ ಆದೇಶ - undefined
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ ದಯಾನಂದ, ಇಂದು ಹೊಸನಗರದ ರಿಪ್ಪನ್ಪೇಟೆಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ತೆರವುಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಕಟ್ಟಡ ತೆರವುಗೊಳಿಸಲು ಶಿವಮೊಗ್ಗ ಡಿಸಿ ಆದೇಶ
ಈ ವೇಳೆ ಅವರು ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ತೆರವುಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ತರಗತಿಗಳಿಗೆ ತೆರಳಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ರಿಪ್ಪನ್ಪೇಟೆಯ ಸಾಮಾಜಿಕ ಹೋರಾಟಗಾರ ಕೃಷ್ಣಪ್ಪ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು. ಛತ್ತೀಸ್ಗಢ ಮೂಲದ ಸತ್ತ್ಪಾಲ್ ಎಂಬ ಬಾಲಕ ಶಿವಮೊಗ್ಗದಲ್ಲೇ ಓದುತ್ತಿದ್ದು, ಬಾಲಕನ ಕುಟುಂಬಕ್ಕೆ ಶಿವಮೊಗ್ಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಮಾನವಿ ಮಾಡಿಕೊಂಡರು.