ಶಿವಮೊಗ್ಗ:ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯ ಬಗ್ಗೆ ಕಾನೂನು ಹೋರಾಟದ ಬದಲು ಜನಪರ ಹೋರಾಟವನ್ನೇ ಹೆಚ್ಚು ಪ್ರಬಲವಾಗಿ ರೂಪಿಸಲು ಒಲವು ವ್ಯಕ್ತವಾಗಿದೆ ಎಂಬ ಅಭಿಪ್ರಾಯ ನಗರದಲ್ಲಿ ನಡೆದ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಭೆಯಲ್ಲಿ ವ್ಯಕ್ತವಾಯಿತು.
ಶಿವಮೊಗ್ಗದಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಭೆ: ಬಹುಜನರ ಅಭಿಪ್ರಾಯವೇನು? - undefined
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಕುರಿತು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಭೆ ನಡೆಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಸಭೆಯಲ್ಲಿ ಮಾತನಾಡಿದ ಪರಿಸರವಾದಿ ಅಜಯ್‌ಕುಮಾರ್ ಶರ್ಮಾ, ಇದರ ಬಗ್ಗೆ ಕಾನೂನು ಹೋರಾಟ ಮಾಡುವುದು ಈ ಸಂದರ್ಭದಲ್ಲಿ ಪರಿಣಾಮಕಾರಿ ಎನಿಸದು. ಈಗಾಗಲೇ ಎತ್ತಿನಹೊಳೆ ಯೋಜನೆ ಬಗ್ಗೆ ಹಸಿರುಪೀಠವು ತಕರಾರು ಬೇಡ ಎಂದು ಹೇಳಿದೆ. ಶರಾವತಿ ಯೋಜನೆ ಬಗ್ಗೆಯೂ ಅದೇ ಅಭಿಪ್ರಾಯ ನೀಡುವ ಸಾಧ್ಯತೆಗಳಿವೆ. ಹಾಗಾಗಿ ಜನಪರ ಹೋರಾಟವನ್ನೇ ಪರಿಣಾಮಕಾರಿಯಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ನಾ.ಡಿಸೋಜ, ಹರ್ಷಕುಮಾರ್ ಕುಗ್ವೆ, ಶಶಿ ಸಂಪಳ್ಳಿ, ಡಾ.ಸುಬ್ಬಣ್ಣ, ಜೆ.ಎಲ್.ಜನಾರ್ಧನ್, ವಿನ್ಸೆಂಟ್ ರೋಡ್ರಿಗ್ರಸ್, ರಾಘವೇಂದ್ರ, ಎನ್.ಮಂಜುನಾಥ್, ವೈ.ಕೆ.ಸೂರ್ಯನಾರಾಯಣ ಸಭೆಯಲ್ಲಿ ಉಪಸ್ಥಿತರಿದ್ದರು.