ಕರ್ನಾಟಕ

karnataka

ETV Bharat / city

ಪ್ರಚೋದನಕಾರಿ ಭಾಷಣ ಆರೋಪ; ಸಚಿವ ಈಶ್ವರಪ್ಪರನ್ನು ಬಂಧಿಸುವಂತೆ ಎಸ್ಪಿಗೆ ಮನವಿ - ಎಸ್‌ಡಿಪಿಐ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಶಿವಮೊಗ್ಗ ಘಟಕವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮನವಿ ಸಲ್ಲಿಸಿದೆ.

sdpi-demanding-for-arrest-the-minister-ks-eshwarappa-in-shimoga
ಪ್ರಚೋದನಕಾರಿ ಭಾಷಣ ಆರೋಪ; ಸಚಿವ ಈಶ್ವರಪ್ಪರನ್ನು ಬಂಧಿಸುವಂತೆ ಎಸ್ಪಿಗೆ ಮನವಿ

By

Published : Aug 10, 2021, 1:37 AM IST

ಶಿವಮೊಗ್ಗ: ಸಚಿವ ಕೆ.ಎಸ್‌.ಈಶ್ವರಪ್ಪನವರು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಎಸ್‌ಡಿಪಿಐ ಜಿಲ್ಲಾ ಸಮಿತಿ ಎಸ್ಪಿಗೆ ದೂರು ನೀಡಿದೆ. ಶಿವಮೊಗ್ಗದಲ್ಲಿ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಸಚಿವ ಈಶ್ವರಪ್ಪನವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸಚಿವರೆನ್ನುವುದನ್ನು ಮರೆತು ಪ್ರಚೋದನೆ ನೀಡಲು ಮುಂದಾಗಿರುವ ಸಚಿವ ಈಶ್ವರಪ್ಪ ಅವರ ಭಾಷಣ ರಾಜ್ಯದಲ್ಲಿ ಗಲಭೆಗೆ ಅನುವು ಮಾಡಿಕೊಡುತ್ತದೆ. ಇಂತಹ ಹೇಳಿಕೆ ನೀಡಿರುವವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಿ ಕಾನೂನಿನ ಪಾಠ ಕಲಿಸಬೇಕಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ಸಮಿತಿ ಹೇಳಿದೆ. ಈ ವೇಳೆ ಜಿಲ್ಲಾ ಸಮಿತಿ ಅಧ್ಯಕ್ಷ ಸಲೀಂ ಖಾನ್, ಜಿಲ್ಲಾ ಸಮಿತಿ ಸದಸ್ಯರಾದ ಸಾಧಿಕ್ ಖಾನ್, ಜೀಲಾನ್ ರಜಾ ಖಾನ್, ಫೈರೋಜ್ ಖಾನ್ ಹಾಗೂ ಇಮ್ರಾನ್ ಉಪಸ್ಥಿತರಿದ್ದರು.

ABOUT THE AUTHOR

...view details