ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಗುರುವಾರದವರೆಗೆ 144 ಸೆಕ್ಷನ್ ಜಾರಿ.. ಬೈಕ್​ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ - 144 section imposed in Shivamogga

ವೀರ ಸಾವರ್ಕರ್ ಫ್ಲೆಕ್ಸ್ ಹರಿದ ವಿಚಾರ ಹಾಗೂ ಯುವಕನಿಗೆ ಚಾಕು ಇರಿದ ಪ್ರಕರಣದ ಬಳಿಕ ಶಿವಮೊಗ್ಗದಲ್ಲಿ ಗುರುವಾರ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗದಲ್ಲಿ ಗುರುವಾರದವರೆಗೆ 144 ಸೆಕ್ಷನ್ ಜಾರಿ
ಶಿವಮೊಗ್ಗದಲ್ಲಿ ಗುರುವಾರದವರೆಗೆ 144 ಸೆಕ್ಷನ್ ಜಾರಿ

By

Published : Aug 16, 2022, 11:38 AM IST

ಶಿವಮೊಗ್ಗ: ಸಾವರ್ಕರ್​ ಫ್ಲೆಕ್ಸ್ ತೆಗೆದ ವಿಚಾರ ಸಂಬಂಧ ನಗರದಲ್ಲಿ 144 ಸೆಕ್ಷನ್ ಗುರುವಾರದ ತನಕ ಮುಂದುವರೆಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಬಿಗುವಿನ ವಾತಾವರಣದಿಂದ ಸೋಮವಾರ ಮಧ್ಯಾಹ್ನವೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ನಿಷೇಧಾಜ್ಞೆ ಜಾರಿ ಇರುವುದರಿಂದ 5 ಜನಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಸಭೆ ಸಮಾರಂಭ, ಮೆರವಣಿಗೆ ಮತ್ತು ವಿಜಯೋತ್ಸವ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ. ಯಾವುದೇ ಆಯುಧ, ಮಾರಕಾಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ತೆಗದುಕೊಂಡು ಹೋಗುವುದು ಹಾಗೂ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿ, ಶವಗಳ ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ, ಬಿತ್ತಿಚಿತ್ರಗಳನ್ನು ತೋರಿಸಲು ಅವಕಾಶವಿಲ್ಲ ಎಂದು ಆದೇಶಿಸಲಾಗಿದೆ.

ದ್ವಿಚಕ್ರ ವಾಹನದಲ್ಲಿ 40 ವರ್ಷಕ್ಕಿಂತ ಕಿರಿಯವರು ಹಿಂಬದಿ ಸವಾರಿ ಮಾಡುವಂತಿಲ್ಲ:ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ವಿಧಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಆದರೆ, 40 ವರ್ಷ ಮೇಲ್ಪಟ್ಟ ಪುರುಷರಿಗೆ ನಿರ್ಬಂಧವಿಲ್ಲ. ಮಹಿಳೆಯರ ಸಂಚಾರಕ್ಕೂ ಯಾವುದೇ ನಿರ್ಬಂಧವಿಲ್ಲ. ಅನಿವಾರ್ಯ ಪರಿಸ್ಥಿತಿ ಹೊರತು ಪಡಿಸಿ ರಾತ್ರಿ 9 ರಿಂದ ಬೆಳಗ್ಗೆ 5 ರ ತನಕ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಿದೆ.

ಆದೇಶ
ಆದೇಶ

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ಹರಿದ ವಿಚಾರ ಹಾಗೂ ಯುವಕನಿಗೆ ಚಾಕು ಇರಿದ ಪ್ರಕರಣದ ಬಳಿಕ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಶಿವಮೊಗ್ಗ ನಗರ ಹಾಗೂ ಭದ್ರಾವತಿ ವ್ಯಾಪ್ತಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ.

(ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್)

ABOUT THE AUTHOR

...view details