ಕರ್ನಾಟಕ

karnataka

ETV Bharat / city

ಈಶ್ವರಪ್ಪ ಅವರ ಹಿಂದೆ RSS ಎಂಬ ದೊಡ್ಡ ಶಕ್ತಿಯಿದೆ: ವಿನಯ್ ಗುರೂಜಿ - Vinay guruji statement

ಈಶ್ವರಪ್ಪ ಅವರ ಮನೆ ಕಾರ್ಯಕ್ರಮ ಎಂದರೆ ನಮ್ಮ ಮನೆ ಕಾರ್ಯಕ್ರಮ ಇದ್ದಂತೆ. ಹಾಗಾಗಿ ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ನಾನು ಭಾಗಿಯಾಗುತ್ತೇನೆ ಎಂದು ವಿನಯ್ ಗುರೂಜಿ ಹೇಳಿದರು.

shivamogga
ಶಿವಮೊಗ್ಗ

By

Published : Oct 17, 2021, 5:33 PM IST

ಶಿವಮೊಗ್ಗ: ಸಚಿವ ಕೆ ಎಸ್​ ಈಶ್ವರಪ್ಪ ಅವರ ಹಿಂದೆ ಆರ್​​ಎಸ್ಎಸ್(RSS) ಅನ್ನೊ ದೊಡ್ಡ ಶಕ್ತಿ ಇದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್, ಶ್ರೀಗಂಧ ಸಂಸ್ಥೆ ಹಾಗು ಶನೇಶ್ವರ ದೇವಾಲಯದ ವತಿಯಿಂದ ಈಶ್ವರಪ್ಪ ಕುಟುಂಬದವರು ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆರ್​ಎಸ್​ಎಸ್​​ ದೇಶಕ್ಕಾಗಿ ಹೇಗೆ ಬದುಕಬೇಕು ಹಾಗು ತಂದೆ, ತಾಯಿಯ ಋಣವನ್ನು ಹೇಗೆ ತೀರಿಸಬೇಕು ಎನ್ನುವುದನ್ನು ಕಲಿಸುತ್ತದೆ ಎಂದರು.

ಈಶ್ವರಪ್ಪ ಅವರ ಹಿಂದೆ RSS ಎಂಬ ದೊಡ್ಡ ಶಕ್ತಿಯಿದೆ: ವಿನಯ್ ಗುರೂಜಿ

ಈಶ್ವರಪ್ಪ ಅವರ ಮನೆ ಕಾರ್ಯಕ್ರಮ ಎಂದರೆ ನಮ್ಮ ಮನೆ ಕಾರ್ಯಕ್ರಮ ಇದ್ದಂತೆ. ಹಾಗಾಗಿ ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ನಾನು ಭಾಗಿಯಾಗುತ್ತೇನೆ ಎಂದರು.

ಭಜನೆ ಮಾಡಿದ ಸಚಿವರು:

ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ‌.ಎಸ್ ಈಶ್ವರಪ್ಪ ಕುಟುಂಬದವರೊಂದಿಗೆ ಭಜನೆ ಮಾಡಿದರು. ಕಾರ್ಯಕ್ರಮದಲ್ಲಿ ಆನಂದ ಗುರೂಜಿ ಅವರು ಈಶ್ವರಪ್ಪ ಅವರಿಗೆ ಕಮಲದ ಹೂ ನೀಡಿ ಆಶೀರ್ವದಿಸಿದರು.

ಈ ಸಂದರ್ಭ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಬಿಜೆಪಿ ಮುಖಂಡರಾದ ಎಸ್ ದತ್ತಾತ್ರಿ, ಚನ್ನಬಸಪ್ಪ, ಈಶ್ವರಪ್ಪ ಕುಟುಂಬದ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details