ಕರ್ನಾಟಕ

karnataka

ETV Bharat / city

ಆರ್​ಎಸ್​​ಎಸ್​ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್​ ಹೋಗ್ತಿದೆ: ಕುಮಾರಸ್ವಾಮಿ - ಹೆಚ್​ ಡಿ ಕುಮಾರಸ್ವಾಮಿ

ಆರ್​ಎಸ್ಎಸ್​ಗೆ ಬಿಜೆಪಿಯಿಂದ ನೇರ ಕಮಿಷನ್​ ಹೋಗುತ್ತದೆ. ಮುಂದಿನ ವರ್ಷದ ಚುನಾವಣೆಗೆ ಹಣ ಸಂಗ್ರಹಿಸಲಾಗುತ್ತದೆ. ಬಿಜೆಪಿ ಆಡಳಿತ ನಡೆಸುತ್ತಿಲ್ಲ ಸೇರವಾಗಿ ಆರ್​ಎಸ್​ಎಸ್​ನಿಂದ ಅಧಿಕಾರ ಚಲಾಯಿಸಲಾಗುತ್ತದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

H D Kumaraswamy
ಹೆಚ್​ ಡಿ ಕುಮಾರಸ್ವಾಮಿ

By

Published : Jun 26, 2022, 7:47 PM IST

ಶಿವಮೊಗ್ಗ:ಈ ಸರ್ಕಾರದಲ್ಲಿ ಕಮಿಷನ್​ಗೆ ಲೆಕ್ಕ ಇಲ್ಲ. ಆರ್​ಎಸ್​ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಾ ಇದೆ. ಆರ್​ಎಸ್​ಎಸ್ ನ 2-3 ಜನ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಸಚಿವರು ಎಲ್ಲರೂ ಪ್ರತಿ ತಿಂಗಳು ಪಕ್ಷದ ಹಿಂದಿರುವ ಮುಖಂಡರಿಗೆ ನೇರವಾಗಿ ಕಮಿಷನ್ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ನೇರವಾಗಿ ಆರ್​ಎಸ್​ಎಸ್​ನಿಂದ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ. ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ಖರ್ಚು ಮಾಡಲು ಹಣ ಸಂಗ್ರಹ ಆಗುತ್ತಿದೆ. ಬೆಂಗಳೂರಿನ ಶಾಸಕರು, ಸಚಿವರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಕೇಳಿ ನೋಡಿ ಎಂದರು.

ರಾಷ್ಟ್ರಪತಿ ಚುನಾವಣೆ ವಿಚಾರ:ಈಗಿರುವ ಎನ್​ಡಿಎ ಅಭ್ಯರ್ಥಿ ಗೆಲ್ಲಲೂ ಯಾವುದೇ ಸಮಸ್ಯೆ ಇಲ್ಲ. ನಡ್ಡಾ ಅವರು ಸಹ ಕಾಲ್ ಮಾಡಿದ್ದಾರೆ‌. ಅಭ್ಯರ್ಥಿ ದ್ರೌಪದಿ ಮುರ್ಮು ಸಹ ಮಾತನಾಡಿದ್ದಾರೆ. ಶಾಸಕರ ಜೊತೆ ಕುಳಿತು ಚರ್ಚೆ ಮಾಡಿ, ಅಂತಿಮ‌ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೆಚ್​ಡಿಕೆ ಹೇಳಿದ್ರು.

ಸರ್ಕಾರವನ್ನು ಆರ್​ಎಸ್​ಎಸ್​ ನೇರವಾಗಿ ಆಡಳಿತ ಮಾಡುತ್ತದೆ

2023ಕ್ಕೆ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ವಿಚಾರ:ರಾಜ್ಯದಲ್ಲಿ ನೊಂದವರನ್ನು ರಕ್ಷಿಸಲು ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸ ಇದೆ. ಬಡವರಿಗಾಗಿ ಮತ್ತೊಂದು ಬಾರಿ ಸಿಎಂ ಆಗಲು ದೇವರ ಆಶೀರ್ವಾದ ಇದೆ. ಬಡವರಿಗಾಗಿ ಅಧಿಕಾರ ಹಿಡಿಯುವ ಇಚ್ಛೆಯಿದೆ. ಯಾರೇ ಏನೇ ಹೇಳಲಿ. ಜೆಡಿಎಸ್ ಪಕ್ಷ ಮುಗಿಸಿದ್ದೇವೆ. ತಲೆ ಎತ್ತಲು ಬಿಡಲ್ಲ ಅಂತ ಹೇಳಲಿ. ಯಾರೇ ಹೇಳಿದರೂ ಮೇಲೋಬ್ಬ ಇದ್ದಾನೆ. ಅವನ ಆಶೀರ್ವಾದ ಇದ್ದೇ ಇರುತ್ತದೆ ಎಂದರು.

ಪಂಚರತ್ನ ಯಾತ್ರೆ:ಈ ಬಾರಿ ಜೆಡಿಎಸ್​ಅನ್ನು ಅಧಿಕಾರಕ್ಕೆ ತರಲೇಬೇಕು ಎಂದು ಮಿಷನ್ 123 ಗುರಿ ಇಟ್ಟುಕೊಂಡಿದ್ದೇವೆ. ಸ್ವತಂತ್ರ ಸರ್ಕಾರ ತರುವ ಗುರಿ ಇಟ್ಟುಕೊಂಡು ಜನರಿಗೆ ಮನವಿ ಮಾಡಿದ್ದೇನೆ.ಆಗಸ್ಟ್ ತಿಂಗಳಿನಿಂದ ಪಂಚರತ್ನ ರಥಯಾತ್ರೆ ಮಾಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಆಸೆ ಇಲ್ಲ. ಜನರ ಬದುಕಿಗೆ ಶಾಶ್ವತ ಪರಿಹಾರ ನೀಡಲು ಯಾತ್ರೆ ಹೊರಟಿದ್ದೇನೆ. ಏಳೆಂಟು ತಿಂಗಳು ಟೈಂ ಇದೆ. ಜನರ ಪರಿವರ್ತನೆ ಮಾಡುತ್ತೇನೆ ಎಂದು ವಿಶ್ವಾಸ ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸ್ಪಷ್ಟಪಡಿಸಲಿ:ಪಠ್ಯ ಪರಿಷ್ಕರಣೆ ಬಗ್ಗೆ ಬಿಜೆಪಿಯವರು ಕಾಂಗ್ರೆಸ್ ಆಡಳಿತದಲ್ಲಿ ಪರಿಷ್ಕರಣೆ ಅಂತಾರೆ ಕಾಂಗ್ರೆಸ್ ನವರು ಬಿಜೆಪಿ ಮಾಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದರು

ಮೋದಿ ಸ್ಪಷ್ಟನೆ ನೀಡಲಿ:ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಲಿ ಎಂದರು.

ಇದನ್ನೂ ಓದಿ:ಅವತ್ತು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈ ಟು ಗುವಾಹಟಿ: ಹೆಚ್​ಡಿಕೆ ಕಿಡಿ

ABOUT THE AUTHOR

...view details