ಕರ್ನಾಟಕ

karnataka

ETV Bharat / city

ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು ಹರಿಸುವಂತೆ ಆಗ್ರಹ - ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು

ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಈಗಾಗಲೇ ನೀರು ಹರಿಯುತ್ತಿದೆ. ತುಂಗೆಯ ನೀರು ಇಲ್ಲದೇ ದುರ್ಗಕ್ಕೆ ನೀರು ಬಿಡುತ್ತಿರುವುದರಿಂದ ಭದ್ರಾ ಜಲಾಶಯದ ಅಚ್ಚುಕಟ್ಟಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಸರ್ಕಾರಕ್ಕೆ ಆಗ್ರಹಿಸಿದರು.

Request water from the Tunga Reservoir to the Bhadra Reservoir
ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು ಹರಿಸುವಂತೆ ಆಗ್ರಹ

By

Published : Sep 2, 2020, 1:25 AM IST

ಶಿವಮೊಗ್ಗ:ತುಂಗೆಯ ನೀರನ್ನು ಭದ್ರೆಗೆ ಹರಿಸುವ ಮಹತ್ವದ ಯೋಜನೆ ವಿಳಂಬವಾಗುತ್ತಿದ್ದು, ಶೀಘ್ರವೇ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಸರ್ಕಾರಕ್ಕೆ ಆಗ್ರಹಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಯಲುಸೀಮೆ ಚಿತ್ರದುರ್ಗಕ್ಕೆ ನೀರು ಹರಿಸುವ ಯೋಜನೆಯನ್ನು ನಾವು ಸ್ವಾಗತ್ತಿಸುತ್ತೇವೆ. ಭದ್ರಾ ಜಲಾಶಯದಿಂದ 21.5 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಬೀಡಬೇಕಾಗಿದೆ. ಈ ಯೋಜನೆಯ ಪ್ರಕಾರ ತುಂಗಾ ಜಲಾಶಯದಿಂದ 17.5, ಭದ್ರಾ ಜಲಾಶಯದಿಂದ 6.5 ಟಿಎಂಸಿ ನೀರನ್ನು ಬಿಡಲು ತಿರ್ಮಾನಿಸಲಾಗಿತ್ತು. ಆದರೆ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಯುತ್ತಿಲ್ಲ.

ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಸುಮಾರು 11 ಕಿ.ಮೀ. ಮೂಲಕ ಕೆಲವು ಕಡೆ ಸುರಂಗಗಳನ್ನು ನಿರ್ಮಿಸಿ ಭದ್ರಾ ಜಲಾಶಯಕ್ಕೆ ನೀರು ಬೀಡಬೇಕಾಗಿತ್ತು. ಆದರೆ ಈ ಸೂಚನೆಗಳು ಯಾವು ಕಾಣುತ್ತಿಲ್ಲಾ, ಸುರಂಗ ನಿರ್ಮಿಸಲು ಟೆಂಡರ್ ಕೂಡ ಕರೆದಿಲ್ಲ ಎಂದರು.

ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಈಗಾಗಲೇ ನೀರು ಹರಿಯುತ್ತಿದೆ. ತುಂಗೆಯ ನೀರು ಇಲ್ಲದೇ ದುರ್ಗಕ್ಕೆ ನೀರು ಬಿಡುತ್ತಿರುವುದರಿಂದ ಭದ್ರಾ ಜಲಾಶಯದ ಅಚ್ಚುಕಟ್ಟಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು. ಈ ಯೋಜನೆಗೆ ಸಂಬಂಧಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಏಕೆಂದರೆ ತುಂಗಾ ನದಿಯಿಂದ ಪ್ರತಿ ಮಳೆಗಾಲದಲ್ಲಿ ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥಾಗುತ್ತಿದೆ ಎಂದರು.

ಭದ್ರಾ ಜಲಾಶಯದ ಮುಂಭಾಗದಲ್ಲಿರುವ 90 ಎಕರೆ ಭೂ ಪ್ರದೇಶದಲ್ಲಿ ಭದ್ರಾವನ ಸಸ್ಯ ಪಾರ್ಕ್ ಗೆ ಚಾಲನೆ ನೀಡಿ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು ‌.



ABOUT THE AUTHOR

...view details