ಕರ್ನಾಟಕ

karnataka

ETV Bharat / city

ಲಸಿಕೆ ಪಡೆಯಲು ಸ್ಮಾರ್ಟ್ ಫೋನ್​​ ಮೂಲಕ ರಿಜಿಸ್ಟರ್: ಫೋನ್ ಇಲ್ಲದವರ ಪರಿಸ್ಥಿತಿಯೇನು? - shimogga vaccination news

ಲಸಿಕೆ ಬೇಕಾದವರು ತಮ್ಮ ಸ್ಮಾರ್ಟ್ ಫೋನ್​​ ಮೂಲಕವೇ ರಿಜಿಸ್ಟರ್ ಆಗಬೇಕಿದ್ದು, ಇದು ಗ್ರಾಮೀಣ ಪ್ರದೇಶದಲ್ಲಿ ತುಸು ಕಷ್ಟ ಎನ್ನಬಹುದು. ಹೊರಗೆ ಕಂಪ್ಯೂಟರ್​​ ಸೈಬರ್​ಗೆ ತೆರಳಿ ರಿಜಿಸ್ಟರ್​ ಮಾಡಿಸೋಣ ಎಂದ್ರೆ ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ಕಂಪ್ಯೂಟರ್​​ ಸೈಬರ್​ ಇಲ್ಲ. ಅಲ್ಲದೇ ಇದೀಗ ಲಾಕ್​ಡೌನ್​ ಜಾರಿಯಲ್ಲಿದೆ. ಹಾಗಾಗಿ ರಿಜಿಸ್ಟರ್ ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

Register through smart phone to get the vaccine
ಲಸಿಕೆ ಪಡೆಯಲು ಸ್ಮಾರ್ಟ್ ಫೋನ್​​ ಮೂಲಕ ರಿಜಿಸ್ಟರ್

By

Published : May 22, 2021, 1:15 PM IST

ಶಿವಮೊಗ್ಗ:ಕೋವಿಡ್ ಎರಡನೇ ಅಲೆ ಹೊಡೆತಕ್ಕೆ ದೇಶ ನಲುಗಿದೆ. ಕೋವಿಡ್​ಗೆ ಲಸಿಕೆ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇನ್ನೂ ಜನಸಾಮಾನ್ಯರಲ್ಲಿ ಗೊಂದಲವಿದೆ.‌ ಯಾರಿಗೆ ಲಸಿಕೆ ಬೇಕು ಅವರು ಸ್ಮಾರ್ಟ್ ಫೋನ್​​ನಲ್ಲಿ ಸಂಬಂಧಪಟ್ಟ ಆ್ಯಪ್ ಮೂಲಕ ತಮ್ಮ ಲಸಿಕೆಯನ್ನು ಕಾಯ್ದಿರಿಸಬೇಕಿದೆ. ಸದ್ಯ ಭಾರತದಲ್ಲಿ ಸ್ಮಾರ್ಟ್ ಫೋನ್​ ಬಳಕೆ ಶೇ. 42ರಷ್ಟಿದೆ. ಇದರಿಂದ ಭಾರತದಲ್ಲಿ ಸ್ಮಾರ್ಟ್ ಫೋನ್​​ ಬಳಕೆ ಮಾಡುವವರ ಸಂಖ್ಯೆ ವಿದೇಶಗಳಿಗೆ ಹೋಲಿಕೆ ಮಾಡಿದ್ರೆ, ಕೊಂಚ ಕಡಿಮೆ ಎನ್ನಬಹುದು. ಇಂತಹ ಸನ್ನಿವೇಶದಲ್ಲಿ ಲಸಿಕೆ ಬೇಕಾದವರು ತಮ್ಮ ಸ್ಮಾರ್ಟ್ ಫೋನ್​​ ಮೂಲಕವೇ ರಿಜಿಸ್ಟರ್ ಆಗಬೇಕಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ತುಸು ಕಷ್ಟ ಎನ್ನಬಹುದು.

ಲಸಿಕೆ ಪಡೆಯಲು ಸ್ಮಾರ್ಟ್ ಫೋನ್​​ ಮೂಲಕ ರಿಜಿಸ್ಟರ್; ಫೋನ್ ಇಲ್ಲದವರ ಕಥೆ ಏನು?

ಹೊರಗೆ ಕಂಪ್ಯೂಟರ್​​ ಸೈಬರ್​ಗೆ ತೆರಳಿ ರಿಜಿಸ್ಟರ್​ ಮಾಡಿಸೋಣ ಎಂದ್ರೆ ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ಕಂಪ್ಯೂಟರ್​​ ಸೈಬರ್​ ಇಲ್ಲ. ಅಲ್ಲದೇ ಇದೀಗ ಲಾಕ್​ಡೌನ್​ ಜಾರಿಯಲ್ಲಿದೆ. ಹಾಗಾಗಿ ರಿಜಿಸ್ಟರ್ ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕೋವಿಡ್ ಲಸಿಕೆಯನ್ನು ಮೊದಲು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿತ್ತು. ನಂತರ ಅದು 45 ವರ್ಷ ಮೇಲ್ಪಟ್ಟವರಿಗೆ ಎಂದು ಮಾಡಲಾಯಿತು. ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದಾಗಿ ಘೋಷಣೆ ಮಾಡಲಾಯಿತು. 60 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವ ಜಾಗದಲ್ಲಿಯೇ ರಿಜಿಸ್ಟರ್ ಮಾಡಿ ಲಸಿಕೆ ಪಡೆಯಬಹುದಾಗಿತ್ತು.

18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕಾದ್ರೆ, ಅವರು ತಮ್ಮ ಸ್ಮಾರ್ಟ್ ಫೋನ್​​ನಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಅವರಿಗೆ ಲಸಿಕೆಯ ಕೇಂದ್ರ ತಿಳಿಸಲಾಗುವುದು. ಲಸಿಕೆ ಪಡೆಯುವವರು ಆ ಸ್ಥಳಕ್ಕೆ ಹಾಗೂ ನಿಗದಿಪಡಿಸಿದ ಸಮಯಕ್ಕೆ ಹೋಗಿ ಲಸಿಕೆ ಪಡೆಯಬೇಕಿದೆ. ಈ ರೀತಿ ಸ್ಮಾರ್ಟ್ ಫೋನ್​​ನಲ್ಲಿ ರಿಜಿಸ್ಟರ್​ಅನ್ನು ನಗರ ಪ್ರದೇಶದ ‍ಯುವಕರು ಮಾಡಿಕೊಳ್ಳುತ್ತಾರೆ. ಆದ್ರೆ ನಗರ ಪ್ರದೇಶದಲ್ಲಿಯೂ ಅನೇಕ ಬಡವರು ಹಾಗೂ ಕೂಲಿ ಕಾರ್ಮಿಕರಿದ್ದಾರೆ. ಇವರುಗಳ ಬಳಿ ಕನಿಷ್ಠ ಮಾತನಾಡಲು ಸಹ ಫೋನ್​​ ಇಲ್ಲ. ಇನ್ನೂ ಕೆಲವರ ಬಳಿ ಕೇವಲ ಕೀ ಪ್ಯಾಡ್ ಹ್ಯಾಂಡ್ ಸೆಟ್​​ಗಳಿವೆ. ಇವರು ಹೇಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ರಿಜಿಸ್ಟರ್ ಮಾಡಿಸಿಕೊಂಡು ಲಸಿಕೆ ಪಡೆಯುವುದು ಹೇಗೆ ಎಂಬ ಭಯ ಈಗ ಬಡವರಿಗೆ ಹಾಗೂ ಗ್ರಾಮೀಣ ಭಾಗದ ಜನತೆಗೆ ಕಾಡಲು ಪ್ರಾರಂಭಿಸಿದೆ.

ಗ್ರಾಮೀಣ ಭಾಗದ ಅನೇಕರಿಗೆ ಫೋನ್ ಅವಶ್ಯಕತೆಯೇ ಇರುವುದಿಲ್ಲ. ಫೋನ್​ ಹೇಗೆ ಬಳಸಬೇಕು ಎಂಬುದು ಸಹ ತಿಳಿದಿಲ್ಲ. ಕೆಲವರ ಬಳಿ ಸ್ಮಾರ್ಟ್ ಫೋನ್​ ಇದ್ದರೂ ಅದನ್ನು ಅವರು ಕೇವಲ ಕರೆ ಸ್ವೀಕರಿಸಲು ಹಾಗೂ ಕರೆ ಮಾಡಲು ಮಾತ್ರ ಬಳಸುತ್ತಿದ್ದಾರೆ. ಇನ್ನೂ ಅನೇಕ ಕೃಷಿಕರು ಗದ್ದೆ, ನೀರಿನಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಸಣ್ಣ ಮೊಬೈಲ್ (ಕೀ ಪ್ಯಾಡ್ ಸೆಟ್) ಬಳಸುತ್ತಿದ್ದಾರೆ. ಇದರಲ್ಲಿ ಹೇಗೆ ರಿಜಿಸ್ಟರ್ ಮಾಡಬಹುದು.

ಈಗಾಗಲೇ ಕೊರೊನಾ ಗ್ರಾಮೀಣ ಭಾಗದಲ್ಲಿಯೂ ಹೆಚ್ಚಾಗುತ್ತಿದೆ. ಆದರೆ ಇವರಿಗೆಲ್ಲ ಲಸಿಕೆ ನೀಡಬೇಕಿದೆ. ಆದರೆ ರಿಜಿಸ್ಟರ್ ಮಾಡಿಸದೇ ಲಸಿಕೆ ನೀಡಲು ಆಗೋದಿಲ್ಲ. ಸ್ಮಾರ್ಟ್ ಫೋನ್​​ ಇಲ್ಲದೇ ಇರುವವರಿಗೆ ಕೊರೊನಾ ಲಸಿಕೆ ಹೇಗೆ ಪಡೆಯುವುದು ಎಂಬ ಭಯ ಕಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿಲ್ಲ ಸೂಕ್ತ ಆ್ಯಂಬುಲೆನ್ಸ್​​ ವ್ಯವಸ್ಥೆ!

ಸರ್ಕಾರ ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ಲಿಸಿಕಾಭಿಯಾನ ನಡೆಸಿ‌ ಲಸಿಕೆ ನೀಡಬೇಕಿದೆ ಎಂದು ರೈತ ಮುಖಂಡರು ಆಗ್ರಹಿಸಿದ್ರೆ, ಕೋವಿಡ್ ಲಸಿಕೆಯನ್ನು ಮನೆ ಮನೆಗೆ ಹೋಗಿ ಪೋಲಿಯೋ ಅಭಿಯಾನದ ರೀತಿ ಮಾಡಬೇಕಿದೆ ಎ‌ನ್ನುತ್ತಾರೆ ಹೋರಾಟಗಾರದ ಶ್ರೀಪಾಲ್.

ABOUT THE AUTHOR

...view details