ಕರ್ನಾಟಕ

karnataka

ETV Bharat / city

ಮಣ್ಣು ಮುಕ್ಕ ಹಾವು ಸಾಗಾಟ: ಸಾಗರದಲ್ಲಿ ಮೂವರ ಬಂಧನ - ಅಕ್ರಮ ಸಾಗಾಟ

ಎರಡು ತಲೆ ಹಾವು ಅಥವಾ ಮಣ್ಣು ಮುಕ್ಕ ಹಾವು ಎಂದು ಕರೆಯಲ್ಪಡುವ ಈ ಹಾವನ್ನು ಮನೆಯಲ್ಲಿಟ್ಟುಕೊಂಡರೆ ಐಶ್ವರ್ಯ, ಸಂಪತ್ತು ವೃದ್ಧಿಯಾಗುತ್ತದೆ ಎಂಬ ಮೂಢನಂಬಿಕೆ ಇದೆ. ಹೀಗಾಗಿಯೇ ಕೆಲ ದುರುಳರು ಇದನ್ನು ಕಂಡಲ್ಲಿ ಹಿಡಿದು ಮಾರಾಟ ಮಾಡುವ ದಂಧೆಗಿಳಿದಿದ್ದಾರೆ. ಇದನ್ನು ಇಂಗ್ಲೀಷ್​ನಲ್ಲಿ ರೆಡ್​ ಸ್ಯಾಂಡ್​ ಬೊವ್ ಎಂದೂ ಕರೆಯುತ್ತಾರೆ.

ಮಣ್ಣು ಮುಕ್ಕ ಹಾವು ಸಾಗಾಟ: ಸಾಗರದಲ್ಲಿ ಮೂವರ ಬಂಧನ

By

Published : Oct 5, 2019, 5:01 AM IST


ಶಿವಮೊಗ್ಗ:ಮಣ್ಣು ಮುಕ್ಕ ಹಾವನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಸಾಗರದ ಬಸ್ ನಿಲ್ದಾಣದಲ್ಲಿ ಅರಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದು, ಹಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಣ್ಣು ಮುಕ್ಕಾ ಹಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿದ್ದು, ಹಾವನ್ನು ಸಾಗಾಟ ಮಾಡುತ್ತಿದ್ದ ಪ್ರಮೋದ್, ಸಿದ್ದಪ್ಪ ಹಾಗೂ ಮಲ್ಲೇಶ್​ರನ್ನು ಬಂಧಿಸಿದ್ದಾರೆ.

ಹಾವನ್ನು ನಾಗಮಂಗಲದ ಬೆಳ್ಳೂರಿನಿಂದ ಸಾಗರದ ಬಸ್ ನಿಲ್ದಾಣಕ್ಕೆ ತರಲಾಗಿತ್ತು ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪ್ರಬಾರ ಪಿಎಸ್​ಐ ರಂಗನಾಥ್, ಸಿಬ್ಬಂದಿ ಗಣೇಶ್, ಗಿರೀಶ್, ಮಂಜುನಾಥ್, ರತ್ನಾಕರ್, ವಿಶ್ವನಾಥ್ ಹಾಗೂ ಪುಷ್ಪಾ ಭಾಗಿಯಾಗಿದ್ದರು.

ABOUT THE AUTHOR

...view details