ಶಿವಮೊಗ್ಗ:6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ, 50 ಸಾವಿರ ದಂಡ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಲಿಂಗರಾಜ ಅಲಿಯಾಸ್ ನವೀನ (18) ಶಿಕ್ಷೆಗೊಳಗಾದ ಅಪರಾಧಿ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ರಲ್ಲಿ ಲಿಂಗರಾಜ ಅಲಿಯಾಸ್ ನವೀನ ನೆರೆ ಮನೆಯ 6 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದನು. ಬಾಲಕಿ ಅಸ್ವಸ್ಥಳಾಗಿದ್ದ ಹಿನ್ನೆಲೆ ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ಎಸಗಿರುವುದು ಗೊತ್ತಾಗಿತ್ತು. ಆ ಬಳಿಕ ಪೋಷಕರು ದೂರು ದಾಖಲಿಸಿದ್ದರು. ನಂತರ ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣ ಬರೋಬ್ಬರಿ 4 ವರ್ಷಗಳ ಕಾಲ ನಡೆದು ಈಗ ತೀರ್ಪು ಹೊರಬಿದ್ದಿದೆ.