ಶಿವಮೊಗ್ಗ: ಸ್ಪಷ್ಟವಾಗಿ ಯಾವುದೇ ಡೌಟ್ ಇಲ್ಲದೇ ಮಾಡಬಾರದ ಕೇಲಸ ಮಾಡಿರುವುದು ತಿಳಿಯುತ್ತಿದೆ. ಹಾಗಾಗಿ ರಮೇಶ್ ಜಾರಕಿಹೊಳಿಯವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದರು.
ರಮೇಶ್ ಜಾರಕಿಹೊಳಿ ಸಾರ್ವಜನಿಕ ಜೀವನದಲ್ಲಿ ಇರಬಾರದು: ಎಸ್.ಆರ್.ಹಿರೇಮಠ
ಈ ಪ್ರಕರಣ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ದೊಡ್ಡ ಪ್ರಹಾರವಾಗಿದೆ. ಸ್ಪಷ್ಟವಾಗಿ ಮೇಲ್ನೋಟಕ್ಕೆ ಯಾವುದೇ ಸಂದೇಹವಿಲ್ಲದೆ ಮಾಡಬಾರದ ಕೆಲಸ ಮಾಡಿರುವುದು ಕಾಣುತ್ತಿದೆ. ಹಾಗಾಗಿ ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೆಮಠ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಚಾವ್ ಆಗುವ ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನ ಅಥವಾ ನ್ಯಾಯವನ್ನು ಎತ್ತಿ ಹಿಡಿಯುವ, ಇಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ಕೋಡಿಸುವ ಉದ್ದೇಶ ಅವರಲ್ಲಿಲ್ಲ. ಸಚಿವ ಸ್ಥಾನದಿಂದ ಕೆಳಗಿಳಿದರೂ ಹುನ್ನಾರದಲ್ಲಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರ, ಹಣಕ್ಕಾಗಿ ಬಿಟ್ಟು ಬಂದರೆ ಹೊರತು ಬೇರೆ ಯಾವುದಕ್ಕೂ ಅಲ್ಲ. ಈ ಪ್ರಕರಣ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ದೊಡ್ಡ ಪ್ರಹಾರವಾಗಿದೆ. ಸ್ಪಷ್ಟವಾಗಿ ಮೇಲ್ನೋಟಕ್ಕೆ ಯಾವುದೇ ಸಂದೇಹವಿಲ್ಲದೆ ಮಾಡಬಾರದ ಕೆಲಸ ಮಾಡಿರುವುದು ಕಾಣುತ್ತಿದೆ. ಹಾಗಾಗಿ ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಖಾರವಾಗಿ ಹೇಳಿದರು.