ಕರ್ನಾಟಕ

karnataka

ETV Bharat / city

ಶಿಕಾರಿಪುರದ ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ: ರಾಜಕೀಯದಲ್ಲಿ ಹೆಚ್ಚಿದ ಕುತೂಹಲ - ರಂಭಾಪುರಿ ಮಠ

ಶಿಕಾರಿಪುರದ ಸಿಎಂ ಬಿ.ಎಸ್. ಯಡಿಯೂಪ್ಪ ನಿವಾಸಕ್ಕೆ ಇಂದು ಬೆಳ್ಳಂಬೆಳಗ್ಗೆ ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದು, ಹಾಲಿ ರಾಜಕೀಯ ಏರುಪೇರಿನಲ್ಲಿ ರಂಭಾಪುರಿ ಶ್ರೀಗಳ ಭೇಟಿ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ.

Rambhapuri Shree
ಶಿಕಾರಿಪುರದ ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

By

Published : Jul 8, 2021, 11:49 AM IST

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪಟ್ಟಣದ ಕಾನೇರ ಕೇರಿಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರ ನಿವಾಸಕ್ಕೆ ಬೆಳ್ಳಂಬೆಳಗ್ಗೆ ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದರು.‌ ಈ ವೇಳೆ ಮನೆಯಲ್ಲಿದ್ದ ಸಿಎಂ ಯಡಿಯೂರಪ್ಪ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಮ್ಮ ಕುಟುಂಬ ಸಮೇತ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶಿಕಾರಿಪುರದ ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

ಶ್ರೀಗಳು ಪಾದಪೂಜೆಯ ನಂತರ ಯಡಿಯೂರಪ್ಪನವರ ಕುಟುಂಬದವರಿಗೆ ಆಶೀರ್ವಾದ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬ ಮೊದಲಿನಿಂದಲೂ ಸಹ ರಂಭಾಪುರಿ ಮಠದ ಭಕ್ತರು. ಹಾಲಿ ರಾಜಕೀಯ ಏರುಪೇರಿನಲ್ಲಿ ರಂಭಾಪುರಿ ಶ್ರೀಗಳ ಭೇಟಿ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಶಿಕಾರಿಪುರದ ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

ರಂಭಾಪುರಿ ಶ್ರೀಗಳ ಭೇಟಿಯ ವೇಳೆ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಇದನ್ನೂ ಓದಿ:ನಾಯಕತ್ವದ ವಿರುದ್ಧ ಕೆಲವರ ಅಪಸ್ವರ: ದಿಲ್ಲಿಗೆ ಶಾಸಕರ ನಿಯೋಗ ಕೊಂಡೊಯ್ಯುವ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು?

ABOUT THE AUTHOR

...view details