ಶಿವಮೊಗ್ಗ : ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದಾರೆ. ಸಮಾಜಸೇವೆಯ ಮೂಲಕ ಮಾದರಿಯಾಗಿದ್ದ ಅಪ್ಪುವಿನ ಜನ್ಮದಿನವನ್ನು ಅಭಿಮಾನಿಗಳು ಸಾಮಾಜಿಕವಾಗಿ ಆಚರಿಸಿದ್ದು, ಅಂತೆಯೇ ಜಿಲ್ಲೆಯಲ್ಲಿ ಅಪ್ಪು ಜನ್ಮದಿನವನ್ನು ನೇತ್ರದಾನಕ್ಕೆ ನೋಂದಣಿ ಮಾಡುವ ಮೂಲಕ ಆಚರಿಸಲಾಗಿದೆ.
ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಅಪ್ಪು ಅಭಿಮಾನಿಗಳ ಸಹಯೋಗದಲ್ಲಿ ಆಯೋಜಿಸಿದ್ದ ನೇತ್ರದಾನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವ ಬಗ್ಗೆ ನೋಂದಣಿ ಮಾಡಿದ್ದಾರೆ.