ಕರ್ನಾಟಕ

karnataka

ETV Bharat / city

ಶೀಘ್ರವೇ ಪಿಎಸ್ಐ ಮರು ಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ - ಪಿಎಸ್ಐ ಮರು ಪರೀಕ್ಷೆ

ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ತಪ್ಪಿತಸ್ಥರನ್ನು ಮುಲಾಜಿಲ್ಲದೆ ಬಂಧಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : May 10, 2022, 6:48 AM IST

ಶಿವಮೊಗ್ಗ:ಶೀಘ್ರವೇ ಪಿಎಸ್ಐ ಮರುಪರೀಕ್ಷೆ ಮಾಡಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮುಗಿಯುತ್ತಿದಂತೆ ಮರು ಪರೀಕ್ಷೆ ಮಾಡಲಾಗುವುದು. ಪ್ರಕರಣದಲ್ಲಿ ಭಾಗಿಯಾದ ಪೊಲೀಸರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ. ಮುಂದೆ ಇಂತಹ ಕೃತ್ಯಗಳಿಗೆ ಯಾರೂ ಇಳಿಯಬಾರದು ಹಾಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಪಿಎಸ್ಐ ಅಕ್ರಮದ ಕಿಂಗ್​​ಪಿನ್​​ಗಳು ಪ್ರಿಯಾಂಕ್​​ ಖರ್ಗೆ ಅವರ ಎಡಗೈ ಮತ್ತು ಬಲಗೈನಂತಿರುವ ಕಾರ್ಯಕರ್ತರು. ಈ ಬಗ್ಗೆ ಅವರಿಗೆ(ಪ್ರಿಯಾಂಕ್​​ ಖರ್ಗೆ) ನೋಟಿಸ್ ನೀಡಿದರೂ, ತನಿಖೆಗೆ ಹಾಜರಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ದಿವ್ಯಾ ಹಾಗರಗಿ ಅವರ ಫೋಟೋ ಇದೆ. ಅದರ ಬಗ್ಗೆ ಯಾಕೆ ಅವರ ಪಕ್ಷದವರು ಮಾತನಾಡುತ್ತಿಲ್ಲ? ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಅಕ್ರಮ ಹಿನ್ನೆಲೆ, ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details