ಕರ್ನಾಟಕ

karnataka

ETV Bharat / city

ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆ: ಪರಿಹಾರಕ್ಕೆ ಆಗ್ರಹಿಸಿ ಬೆಳೆಗಾರರ ಪ್ರತಿಭಟನೆ - ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ

ಸೊರಬ ತಾಲೂಕಿನಲ್ಲಿ ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ರೈತರು ಕೊಳೆ ಅಡಿಕೆ ಸುರಿದು ಪ್ರತಿಭಟನೆ ನಡೆಸಿದ್ರು.

ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆಗೆ ಪರಿಹಾರ ಆಗ್ರಹಿಸಿ ಪ್ರತಿಭಟನೆ

By

Published : Sep 17, 2019, 9:19 PM IST

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ರೈತರು ಕೊಳೆ ಅಡಿಕೆ ಸುರಿದು ಪ್ರತಿಭಟನೆ ನಡೆಸಿದ್ರು.

ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆಗೆ ಪರಿಹಾರಕ್ಕೆ ಆಗ್ರಹಿಸಿ ಬೆಳೆಗಾರರ ಪ್ರತಿಭಟನೆ

ಮೂರ್ನಾಲ್ಕು ಬಾರಿ ಔಷಧಿ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆ ತೋಟದ ಸಮೀಕ್ಷೆ ನಡೆಸಬೇಕು. ರೈತರಿಂದ ಅರ್ಜಿ ಪಡೆಯುವಾಗ ಪಹಣಿ ಪಡೆಯುವ ಪದ್ಧತಿಯನ್ನು ಕೈಬಿಟ್ಟು, ಸರ್ವೆ ನಂಬರ್ ಮಾತ್ರ ನಮೂದಿಸುವಂತೆ ಸೂಚಿಸಬೇಕು. ತುರ್ತಾಗಿ ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆ ಬೆಳೆಗೆ ಪರಿಹಾರ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಂತರ ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಅಡಿಕೆ ಬೆಳೆಗಾರರು ಮನವಿ ಸಲ್ಲಿಸಿದರು.

ABOUT THE AUTHOR

...view details