ಶಿವಮೊಗ್ಗ:ತನಗೊಂದು ಆಟೋ ಕೊಡಿಸಿ, ಇಲ್ಲ ಆಸ್ತಿಯಲ್ಲಿ ಪಾಲು ಕೊಡಿ ಎಂದು ಕೇಳಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಗುರುಪ್ರಸಾದ್ ಅಣ್ಣನಿಂದಲೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಗುರುಪ್ರಸಾದ್ ತನಗೊಂದು ಆಟೋ ಕೊಡಿಸಿ, ಇಲ್ಲವಾದಲ್ಲಿ ಆಸ್ತಿಯಲ್ಲಿ ಭಾಗ ಮಾಡಿ ಎಂದು ತನ್ನ ಅಮ್ಮನಿಗೆ ಪ್ರತಿ ದಿನ ಕಾಟ ಕೊಡುತ್ತಿದ್ದನು. ಈ ಬಗ್ಗೆ ಸಾಕಷ್ಡು ಮನೆಯಲ್ಲಿ ರಾಜೀ ಪಂಚಾಯತಿ ನಡೆದಿದ್ದರೂ ಸಹ ಗುರುಪ್ರಸಾದ್ ಕಾಟ ನೀಡುತ್ತಿದ್ದನು.