ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಪೊಲೀಸರ ಮೊಬೈಲ್​ಗಳನ್ನೇ ಕದ್ದ ಚಾಲಾಕಿ ಕಳ್ಳರು... ಅದೂ ಒಂದೆರಡಲ್ಲಾ! - ಗಣೇಶನ ನಿಮಜ್ಜನ ಮೆರವಣಿಗೆ

ಶಿವಮೊಗ್ಗದ ಹಿಂದೂ ಸಂಘಟನಾ ಮಹಾ ಮಂಡಳಿಯ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆಗೆ ಬಂದಿದ್ದ ಪೊಲೀಸರ ಮೊಬೈಲ್​​ ಫೋನ್​​ಗಳನ್ನೇ ಕಳ್ಳರು ಎಗರಿಸಿದ್ದಾರೆ.

ಪೊಲೀಸರ ಮೊಬೈಲ್​​ಗಳನ್ನೇ ಎಗರಿಸಿದ ಚಾಲಾಕಿ ಕಳ್ಳರು...

By

Published : Sep 15, 2019, 7:27 PM IST

ಶಿವಮೊಗ್ಗ:ಮೊಬೈಲ್​ ಕಳ್ಳತನವಾದರೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಇಲ್ಲಿ ಪೊಲೀಸರೇ ತಮ್ಮ ಮೊಬೈಲ್​​ಗಳನ್ನ ಕಳೆದುಕೊಂಡು ದೂರು ನೀಡಿದ್ದಾರೆ.​ ಅದೂ ಒಂದಲ್ಲ, ಎರಡಲ್ಲ. ಬರೋಬ್ಬರಿ 27 ಮೊಬೈಲ್​ಗಳು ಕಳ್ಳತನವಾಗಿವೆ.

ಕಳೆದ ಸೆ. 12ರಂದು ನಡೆದ ನಗರದ ಹಿಂದೂ ಸಂಘಟನಾ ಮಹಾ ಮಂಡಳಿಯ ಗಣೇಶನ ನಿಮಜ್ಜನ ಮೆರವಣಿಗೆಗೆ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರು ಬಂದಿದ್ದರು. ಹೀಗೆ ಬಂದ ಪೊಲೀಸರಿಗೆ ವಿವಿಧ ಕಲ್ಯಾಣ ಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಒಂದು ಪೊಲೀಸರ ತಂಡಕ್ಕೆ ನಗರದ ಆರ್​ಎಂಎಲ್ ನಗರದ ಕಲ್ಯಾಣ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಿಮಜ್ಜನ ಮುಗಿಸಿ ಬಂದು ಮಲಗಿದ್ದಾಗ ಕಳ್ಳರ ತಂಡ ಬಂದು ಬರೋಬ್ಬರಿ 27 ಮೊಬೈಲ್​ಗಳನ್ನು ಎಗರಿಸಿಕೊಂಡು ಹೋಗಿದೆ.

ಬೆಳಗಿನ ಜಾವ 3ರಿಂದ 4 ಗಂಟೆ ಹೊತ್ತಿಗೆ ಪೊಲೀಸರು ಗಾಢ ನಿದ್ರೆಯಲ್ಲಿದ್ದಾಗ 27 ಮೊಬೈಲ್ ಹಾಗೂ ಒಟ್ಟು 25 ಸಾವಿರ ನಗದನ್ನು ಕಳ್ಳರು ಎಗರಿಸಿದ್ದು, ಈ ಬಗ್ಗೆ ಮೊಬೈಲ್‌ಗಳನ್ನು ಕಳೆದುಕೊಂಡ ಪೊಲೀಸರೇ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳ್ಳರು ಬೆಲೆಬಾಳುವ ಸ್ಮಾರ್ಟ್ ಫೋನ್‌ಗಳನ್ನು ಮಾತ್ರ ಕಳವು ಮಾಡಿದ್ದು, ಬೇಸಿಕ್ ಸೆಟ್‌ಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಮೊಬೈಲ್ ಕಳ್ಳರ ಜಾಲವೇ ಈ ಕಳ್ಳತನದ ಹಿಂದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ಮೊಬೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details