ಕರ್ನಾಟಕ

karnataka

ETV Bharat / city

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಹರ್ಷದ್ ಕಾಲಿಗೆ ಗುಂಡೇಟು - ಶಿವಮೊಗ್ಗದ ರೌಡಿಶೀಟರ್

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಹರ್ಷದ್ ಕಾಲಿಗೆ ತುಂಗಾನಗರ ಠಾಣೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ..

ರೌಡಿಶೀಟರ್ ಹರ್ಷದ್
ರೌಡಿಶೀಟರ್ ಹರ್ಷದ್

By

Published : Jun 3, 2022, 12:24 PM IST

ಶಿವಮೊಗ್ಗ: ಸುಪ್ರೀಂಕೋರ್ಟ್​ನಿಂದ ಜಾಮೀನು ಪಡೆದು ಹೊರಗೆ ಬಂದ ಬಳಿಕ ಸುಲಿಗೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ರೌಡಿಶೀಟರ್ ಹರ್ಷದ್(24) ಎಂಬಾತನ ಕಾಲಿಗೆ ಪೊಲೀಸರು ಫೈರಿಂಗ್​ ಮಾಡಿದ್ದಾರೆ.

ಇಂದು ಅನುಪಿನಕಟ್ಟೆಯಲ್ಲಿ ಆರೋಪಿ ಹರ್ಷದ್ ಸುಲಿಗೆ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದು ತುಂಗಾನಗರ ಠಾಣೆ ಪಿಎಸ್​ಐ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಆಗ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ಪೊಲೀಸರು ಹರ್ಷದ್ ಮೇಲೆ ಗುಂಡು ಹಾರಿಸಿದ್ದಾರೆ. ರೌಡಿಶೀಟರ್‌ ಕಾಲಿಗೆ ಗುಂಡೇಟು ಬಿದ್ದಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಭೀಕರ ಅಪಘಾತ : ಹೊತ್ತಿ ಉರಿದ ಬಸ್​ನಲ್ಲಿ 7 ಜನ ಸಜೀವ ದಹನ‌ ಶಂಕೆ!

ABOUT THE AUTHOR

...view details