ಕರ್ನಾಟಕ

karnataka

ETV Bharat / city

ವಿಷ ಆಹಾರ ಸೇವನೆ:ರೋಗಿಗಳ‌ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು. -

ವಿಷ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ 29 ಮಂದಿಯನ್ನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭೇಟಿ ನೀಡಿ‌ ಆರೋಗ್ಯ ವಿಚಾರಿಸಿದರು.

ಆರೋಗ್ಯ ವಿಚಾರಿಸುತ್ತಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ

By

Published : May 26, 2019, 7:22 PM IST

ಶಿವಮೊಗ್ಗ: ಶಿಕಾರಿಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವಿಷ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ 29 ಮಂದಿ ದಾಖಲಾಗಿದ್ದು, ಆಸ್ಪತ್ರೆಗೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್​ ಭೇಟಿ ನೀಡಿ‌ ಆರೋಗ್ಯ ವಿಚಾರಿಸಿದ್ದಾರೆ.

ಆರೋಗ್ಯ ವಿಚಾರಿಸುತ್ತಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿಕಾರಿಪುರದ ಅಣ್ಣಾಪುರ ಗ್ರಾಮದ ಗಣೇಶ ಶೆಟ್ರು ಅವರ ಮನೆಯಲ್ಲಿ 3 ದಿನಗಳ ಹಿಂದೆ ಸತ್ಯನಾರಾಯಣ ಪೂಜೆ ಹಾಗೂ ಹೋಮ ನಡೆಸಲಾಗಿತ್ತು. ಆ ವೇಳೆ ಊಟ ಮಾಡಿದ 29 ಜನರಲ್ಲಿ ಇಂದು ವಾಂತಿ-ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಸ್ವಸ್ಥರನ್ನು ಭೇಟಿ ನೀಡಿದ ಜಿಲ್ಲಾಧಿಕಾರಿ, ಪ್ರತಿಯೊಬ್ಬರ ಬಳಿ‌ ತೆರಳಿ ಘಟನೆ ಹೇಗಾಯ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿ‌ ನೀಡಲಾಗುತ್ತಿದ್ದೆಯೇ ಎಂದು ವಿಚಾರಿಸಿದರು.

ಇನ್ನು, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details