ಶಿವಮೊಗ್ಗ: ಲಾಕ್ಡೌನ್ ಸಡಿಲಿಕೆ ಹಿಂಪಡೆಯಬೇಕು. ಇಲ್ಲವಾದರೆ ಶಿವಮೊಗ್ಗಕ್ಕೂ ಕೊರೊನಾ ಕಟಂಕ ಕಾಡಬಹುದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್-19ಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಅದರಂತೆ ಕರ್ನಾಟಕದಲ್ಲೂ ಸಹ ಅನೇಕ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಹರಡಿದೆ. ಇಂತಹ ಸಂದರ್ಭದಲ್ಲಿ ಲಾಕ್ಡೌನ್ ಸಡಲಿಸಿರುವುದು ಸರಿ ಅಲ್ಲ. ಹಾಗಾಗಿ ಲಾಕ್ಡೌನ್ ಸಡಿಲಿಕೆ ಹಿಂಪಡೆದು ಈ ಹಿಂದೆ ಬಿಗಿ ಮಾಡಿದಂತೆ ಲಾಕ್ಡೌನ್ ಬಿಗಿಗೊಳಿಸಬೇಕು. ಇಲ್ಲವಾದರೆ ಗ್ರೀನ್ ಝೋನ್ ಆಗಿರುವ ಶಿವಮೊಗ್ಗದಲ್ಲೂ ಸಹ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಬಹುದು ಎಂದರು.