ಕರ್ನಾಟಕ

karnataka

ETV Bharat / city

ಪ್ಲಾಸ್ಟಿಕ್ ಕವರ್ ತೆಗೆಯದೆ ಸಸಿ ನೆಟ್ಟ ಅರಣ್ಯ ಇಲಾಖೆ: ನೆಡುತೋಪಿನ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ಲೂಟಿ - ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು ಹಿಂದೇಟು

ಅರಣ್ಯ ಇಲಾಖೆಯಿಂದ ಸಸಿಗಳನ್ನು ಪ್ಲಾಸ್ಟಿಕ್ ಕವರ್ ತೆಗೆಯದೇ ಕಾಟಾಚಾರಕ್ಕೆ ನೆಟ್ಟಿರುವ ಘಟನೆ ಭದ್ರಾವತಿ ವಲಯದಲ್ಲಿ ನಡೆದಿದೆ.

kn_smg_04_forest_plastic_7204213
ಪ್ಲಾಸ್ಟಿಕ್ ಕವರ್ ತೆಗೆಯದೆ ಸಸಿ ನೆಟ್ಟ ಅರಣ್ಯ ಇಲಾಖೆ: ನೆಡುತೋಪಿನ ಹೆಸರಿನಲ್ಲಿ ಅಧಕಾರಿಗಳಿಂದ ಹಣ ಲೂಟಿ

By

Published : Jan 18, 2020, 8:22 AM IST

ಶಿವಮೊಗ್ಗ:ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ಪ್ಲಾಸ್ಟಿಕ್ ಕವರ್ ತೆಗೆಯದೇ ಕಾಟಾಚಾರಕ್ಕೆ ನೆಟ್ಟಿರುವ ಘಟನೆ ಭದ್ರಾವತಿ ವಲಯದಲ್ಲಿ ನಡೆದಿದೆ.

ಪ್ರತಿ ವರ್ಷ ಅರಣ್ಯ ಇಲಾಖೆ ನಡುತೋಪು ನಿರ್ಮಾಣ ಮಾಡುತ್ತದೆ. 2019-20 ನೇ ಸಾಲಿನಲ್ಲಿ 25 ಹೆಕ್ಟೇರ್​​​ನಲ್ಲಿ ಲಕ್ಷಾಂತರ ಸಸಿ ನೆಡಲಾಗಿದೆ. ಎಲ್ಲ ಸಸಿಗಳನ್ನು ಪ್ಲಾಸ್ಟಿಕ್ ಸಮೇತ ಮಣ್ಣಿನಲ್ಲಿ ನೆಡಲಾಗಿದ್ದು, ಇದರಿಂದ ಈ‌ ಸಸಿಗಳು ಒಂದೆರೆಡು ವರ್ಷಗಳಲ್ಲಿ ಸಾವನ್ನಪ್ಪುತ್ತವೆ. ಇದರಿಂದ ಮತ್ತೆ ನಡುತೋಪು ಹೆಸರಿನಲ್ಲಿ ಮತ್ತೆ ಹಣ ಲೂಟಿ ಹೊಡೆಯಬಹುದು ಎಂಬ ಕೆಟ್ಟ ಆಲೋಚನೆಯಿಂದ ಇಲಾಖೆಯವರು ಕೆಲಸ ಮಾಡಿಸುತ್ತಿದ್ದಾರೆ. ಈ ಕುರಿತು ಭದ್ರಾವತಿ ಉಕ್ಕುಂದ ಪರಿಸರ ಪ್ರೇಮಿ ಶಿವಕುಮಾರ ರವರು ಜಿಲ್ಲಾ ಮುಖ್ಯಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತ ದೂರನ್ನು ಡಿಸಂಬರ್ 4 ರಂದು ನೀಡುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.

ಪ್ಲಾಸ್ಟಿಕ್ ಕವರ್ ತೆಗೆಯದೆ ಸಸಿ ನೆಟ್ಟ ಅರಣ್ಯ ಇಲಾಖೆ: ನೆಡುತೋಪಿನ ಹೆಸರಿನಲ್ಲಿ ಅಧಕಾರಿಗಳಿಂದ ಹಣ ಲೂಟಿ

ಶಿವಕುಮಾರ ದೂರು ನೀಡಿದ ನಂತರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತನಿಖೆಗೆ ಆದೇಶ ಮಾಡಿ, ನಡುತೋಪುಗಳ ಪರಿಶೀಲನೆಗೆ ತೆರಳಿದಾಗ ಅಲ್ಲಿನ ಅರಣ್ಯಧಿಕಾರಿಗಳು ಪರಿಶೀಲನ ತಂಡಕ್ಕೆ ದಾರಿ ತಪ್ಪಿಸಲು ಯತ್ನಿಸಿದೆ. ಇಷ್ಟಾದರೂ ಸರಿಯಾದ ಜಾಗಕ್ಕೆ ಹೋಗಿ ಪರಿಶೀಲಿಸಿದಾಗ ಸಸಿಯ ಜೊತೆ ಕವರ್ ಕಂಡು ಬಂದಿದೆ. ಭದ್ರಾವತಿಯ ಡಿಎಫ್ಓ ಆಗಿ ನಿವೃತ್ತಿಯಾಗಿರುವ ಚಲುವರಾಜ್, ಆರ್ ಎಫ್‌ಓ ವೀರೇಶ್ ನಾಯ್ಕ ರವರ ವಿರುದ್ದ ಕ್ರಮ ತೆಗದು ಕೊಳ್ಳಲು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಬೆಳೆಸುವುದಾಗಿ ಕೋಟ್ಯಂತರ ರೂ ಲೂಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಅರಣ್ಯ ಖಾತೆ ಸಚಿವ ಸಿ.ಸಿ.ಪಾಟೀಲರು ಸೂಕ್ತ ಕ್ರಮ ತೆಗೆದು ಕೊಳ್ಳಬೇಕಿದೆ.

For All Latest Updates

TAGGED:

ABOUT THE AUTHOR

...view details