ಶಿವಮೊಗ್ಗ: ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗದ ನಾಗರಾಜ್ ಅವರು ಸೆರೆಹಿಡಿದ ಅಪರೂಪದ ವನ್ಯ ಜೀವಿ ಹಾಗೂ ಗ್ರಾಮೀಣ ಬದುಕಿನ ಛಾಯಾಚಿತ್ರಗಳ ಪ್ರದರ್ಶನವನ್ನು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ - ಛಾಯಾಗ್ರಾಹಕ ಶಿವಮೊಗ್ಗದ ನಾಗರಾಜ್ ಛಾಯಾಚಿತ್ರ ಪ್ರದರ್ಶನ
ಶಿವಮೊಗ್ಗ ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗದ ನಾಗರಾಜ್ ಅವರು ಸೆರೆಹಿಡಿದ ಅಪರೂಪದ ವನ್ಯ ಜೀವಿ ಹಾಗೂ ಗ್ರಾಮೀಣ ಬದುಕಿನ ಛಾಯಾಚಿತ್ರಗಳ ಪ್ರದರ್ಶನವನ್ನು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಛಾಯಾಚಿತ್ರ ಪ್ರದರ್ಶನ
ನಿನ್ನೆನಿಂದ ಮೂರು ದಿನಗಳ ಕಾಲ ನಗರದ ಕುವೆಂಪು ರಂಗಮಂದಿರದಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪರಿಸರ, ವನ್ಯಜೀವಿ, ಜನಜೀವನ, ಜಾತ್ರೆ, ಉತ್ಸವ ಮಹಾ ಮಸ್ತಾಭಿಷೇಕ, ಕಂಬಳ, ಹಕ್ಕಿ ಪಕ್ಷಿಗಳು ಸೇರಿದಂತೆ ಇನ್ನೂ ಅನೇಕ ಬಗೆಯ ಛಾಯಾಚಿತ್ರಗಳು ನೋಡುಗರನ್ನು ಸೆಳೆಯುತ್ತಿವೆ. ಶಿವಮೊಗ್ಗ ನಾಗರಾಜ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಅನೇಕ ಛಾಯಚಿತ್ರಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನಕ್ಕೆ ಪಾತ್ರವಾಗಿವೆ. ಹಾಗೂ ವನ್ಯಜೀವಿ, ಪರಿಸರ, ಜನಜೀವನ ಕುರಿತ ಛಾಯಾಚಿತ್ರಗಳು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶನಗೊಂಡವೆ.