ಶಿವಮೊಗ್ಗ:ಡಿಸೇಲ್ ಖರೀದಿಗೆ ಮುಗಿಬಿದ್ದ ಗ್ರಾಹಕರು ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತೈಲ ಖರೀದಿ ನಿಲ್ಲಿಸುವ ಮೂಲಕ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.
ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ: ಪೆಟ್ರೋಲ್ ಡೀಸೆಲ್ ಖರೀದಿಗೆ ಮುಗಿಬಿದ್ದ ಜನ - ಶಿವಮೊಗ್ಗ
ನಾಳೆ ಪೆಟ್ರೋಲ್ ಬಂಕ್ ಮಾಲೀಕರು ಬಂಕ್ ಬಂದ್ ಮಾಡಿ ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಇಂದು ಪೆಟ್ರೋಲ್ ಡೀಸೆಲ್ ಖರೀದಿಗೆ ಜನ ಮುಗಿಬಿದ್ದರು.
ಪೆಟ್ರೋಲ್ ಡೀಸೆಲ್ ಖರೀದಿಗೆ ಮುಗಿಬಿದ್ದ ಜನ
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಜನ ಡಿಸೇಲ್ ಖರೀದಿಗೆ ಮುಗಿ ಬಿದ್ದಿರುವ ಘಟನೆ ನಡೆದಿದೆ. ಮುಂಗಾರು ಪೂರ್ವ ಮಳೆಯಾಗಿರುವ ಹಿನ್ನೆಲೆ ರೈತರು ತಮ್ಮ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ ಹಾಗಾಗಿ ನಾಳೆ ನಡೆಯಲಿರುವ ಬಂಕ್ ಮಾಲೀಕರ ಮುಷ್ಕರದಿಂದ ಸಮಸ್ಯೆ ಆಗಲಿದೆ ಎಂದು ಇಂದೇ ಜನ ಪೆಟ್ರೋಲ್ ಖರೀದಿಗೆ ಮುಗಿಬಿದ್ದಾರೆ.
ಇದನ್ನೂ ಓದಿ:ಜೀವಂತ ಹಾವುಗಳನ್ನು ಹಾರದಂತೆ ಬದಲಿಸಿಕೊಂಡ ವಧು, ವರ -ವಿಡಿಯೋ ವೈರಲ್