ಶಿವಮೊಗ್ಗ:ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಮಿನಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಕಣ್ಣೂರು ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಅಶೋಕ್ ಲೈಲಾಂಡ್ ಮಿನಿ ವಾಹನದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಿನಿ ವಾಹನದ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಮೃತನು ಶಿರಾಳಕೊಪ್ಪ ಮೂಲದವನು ಎಂದು ತಿಳಿದು ಬಂದಿದೆ. ಲಾರಿ ಹೊಸನಗರದಿಂದ ಶಿಕಾರಿಪುರದ ಕಡೆ ಹೋಗುತ್ತಿತ್ತು. ಅಶೋಕ್ ಲೈಲಾಂಡ್ ಮಿನಿ ವಾಹನವು ಶುಂಠಿ ತುಂಬಿಕೊಂಡು ಕುಂದಾಪುರದ ಕಡೆಗೆ ಹೊಗುತ್ತಿತ್ತು.