ಶಿವಮೊಗ್ಗ: ಕೊರೊನಾ ನಿಯಂತ್ರಣಕ್ಕಾಗಿ ವಿಕೇಂಡ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ರಾತ್ರಿ ವೇಳೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರು ಹಾಗೂ ನೂರಕ್ಕೂ ಹೆಚ್ಚು ಜನರನ್ನು ಕೋಟೆ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ್ದಾರೆ.
ವಿಕೇಂಡ್ ಕರ್ಪ್ಯೂ ಉಲ್ಲಂಘಿಸಿದವರನ್ನ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ ಸಿಪಿಐ
ವಿಕೇಂಡ್ ಕರ್ಫ್ಯೂ ಉಲ್ಲಂಘಿಸಿದವರನ್ನು ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿರುವ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮತ್ತೆ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವುದಾಗಿ ಸಿಪಿಐ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಅನಗತ್ಯವಾಗಿ ಓಡಾಡಬೇಡಿ ಎಂದು ಸರ್ಕಾರ ಆದೇಶ ಇದ್ದರು. ನಿಮಯಗಳನ್ನು ಉಲ್ಲಂಘಿಸುತ್ತಿದ್ದಾರೆ. ನೂರಾರು ಜನರು ಅಂಗಡಿಗಳ ಮುಂದೆ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಡಿಆರ್ ಪೊಲೀಸ್‌ನ ವಿಶೇಷ ತಂಡದೊಂದಿಗೆ ಬಸ್‌ನಲ್ಲಿ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ್ದಾರೆ. ಬಳಿಕ ಎಚ್ಚರಿಕೆ ನೀಡಿ ಮನೆಗೆ ಕಳಿಸಿದರು. ಇನ್ನೊಮ್ಮೆ ಯಾರಾದರೂ ಅನಗತ್ಯವಾಗಿ ಮನೆಯಿಂದ ರಾತ್ರಿ ಹೊರಬಂದು ಸುತ್ತಾಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಸಿಪಿಐ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಇನ್ನು, ಶಿವಮೊಗ್ಗ ನಗರದ ಕೋಟೆ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ್ ಅವರು ಸೈಕಲ್‌ನಲ್ಲೆ ಗಸ್ತು ತಿರುಗಿ ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.