ಕರ್ನಾಟಕ

karnataka

ETV Bharat / city

ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲಿಯೇ ಸಾವು - ಶಿವಮೊಗ್ಗ ಅಪಘಾತ ಸುದ್ದಿ

ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಓರ್ವ ಪಾದಚಾರಿ ಸಾವನ್ನಪ್ಪಿರುವುದು ಮಾತ್ರವಲ್ಲದೇ, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

pedestrian dies in an accident in shimogga
ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲಿಯೇ ಸಾವು

By

Published : May 6, 2021, 9:36 PM IST

ಶಿವಮೊಗ್ಗ:ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸೊರಬ ಅಂಕರವಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದ್ರಗುತ್ತಿಯಿಂದ ಸೊರಬಕ್ಕೆ ಬರುತ್ತಿದ್ದ ಆಯಿಲ್ ಟ್ಯಾಂಕರ್ ಕೆ. ಹನೀಫ್ ಸಾಬ್ (55) ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಹನೀಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಹೊಸದಾಗಿ ಮದುವೆ: ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಲವರ್ ಜೊತೆ ಯುವತಿ ಪರಾರಿ

ಪಾದಚಾರಿಗೆ ಡಿಕ್ಕಿ ಹೊಡೆದ ನಂತರ ಲಾರಿ ರಸ್ತೆ ಬದಿಯ ಎರಡು ಮರಗಳಿಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಕಿರಣ್ ಹಾಗೂ ಕ್ಲೀನರ್​​ ಮಹೇಶ್​​ಗೆ ಗಾಯವಾಗಿದ್ದು, ಅವರನ್ನು ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details