ಕರ್ನಾಟಕ

karnataka

ETV Bharat / city

ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಮೊಬೈಲ್ ಕಳ್ಳರು: 14 ಮೊಬೈಲ್ ಫೋನ್ ವಶ - ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣ ಭದ್ರಾವತಿ

ಜಿಲ್ಲೆಯ ಭದ್ರಾವತಿಯ ನ್ಯೂ ಟೌನ್​ ಪೊಲೀಸರು ನಾಲ್ಕು ಜನ ಮೊಬೈಲ್ ಕಳ್ಳರನ್ನು ಬಂಧಿಸಿದ್ದು, ಅವರಿಂದ ಸುಮಾರು 1 ಲಕ್ಷದ 27 ಸಾವಿರ ರೂ. ಬೆಲೆಯ‌ 14 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಮೊಬೈಲ್ ಕಳ್ಳರು: 14 ಮೊಬೈಲ್ ಫೋನ್ ವಶ

By

Published : Oct 5, 2019, 4:42 AM IST

ಶಿವಮೊಗ್ಗ:ಭದ್ರಾವತಿ ನಗರದ ಕೆಎಸ್ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಆರು ಜನರ ತಂಡವೊಂದು ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿತ್ತು. ಇವರನ್ನು ವಿಚಾರಣೆಗೊಳಪಡಿಸಿದಾಗ ಆರು ಜನರಲ್ಲಿ ಇಬ್ಬರು ಓಡಿ ಹೋಗಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಉಳಿದ ನಾಲ್ವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಮೊಬೈಲ್​ ಕಳ್ಳತನ ಬೆಳಕಿಗೆ ಬಂದಿದೆ. ಇವರಿಂದ ಒಟ್ಟು 14 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. ದೇವರಾಜ್, ಶರತ್ ಕುಮಾರ್, ಕೃಷ್ಣಪ್ಪ, ಪಾಲಯ್ಯ ಬಂಧಿತ ಆರೋಪಿಗಳು. ಇವರು ಮೊಬೈಲ್ ಕಳ್ಳರಾಗಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿ ಕೊಂಡಿದ್ದಾರೆ. ಬಂಧಿತರ ಮೇಲೆ ಕಲಂ 379 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details