ಕರ್ನಾಟಕ

karnataka

ETV Bharat / city

ಮುನ್ನೆಚ್ಚರಿಕಾ ಕ್ರಮವಾಗಿ ಮೆಗ್ಗಾನ್ ಆಸ್ಪತ್ರೆಗೆ ತಲುಪಿದ ಆಕ್ಸಿಜನ್

ಮೆಗ್ಗಾನ್​​​ ಕೋವಿಡ್ ಆಸ್ಪತ್ರೆಗೆ ನಿತ್ಯ ಎರಡು ಟ್ಯಾಂಕ್ ಆಕ್ಸಿಜನ್ ಬೇಕಾಗುತ್ತದೆ. ಆದರೆ, ಈಗ ಎರಡು ದಿನಕ್ಕೊಮ್ಮೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಆದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ.

oxygen-tanker-came-to-shimogga-meggan-hospital
ಮುನ್ನೆಚ್ಚರಿಕಾ ಕ್ರಮವಾಗಿ ಮೆಗ್ಗಾನ್ ಆಸ್ಪತ್ರೆಗೆ ತಲುಪಿದ ಆಕ್ಸಿಜನ್

By

Published : May 6, 2021, 10:07 PM IST

ಶಿವಮೊಗ್ಗ: ಆಕ್ಸಿಜನ್ ಕೊರತೆಯಿಂದಾಗಿ ಬೆಡ್ ಇಲ್ಲ ಸಹಕರಿಸಿ ಎಂದು ನಗರದ ಮೆಗ್ಗಾನ್​​​​ ಜಿಲ್ಲಾ ಆಸ್ಪತ್ರೆಯಲ್ಲಿ ನಾಮಫಲಕ ಹಾಕಲಾಗಿತ್ತು. ಇದರಿಂದಾಗಿ ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರು ಆತಂಕದಲ್ಲಿದ್ದರು.

ಹಾಗಾಗಿ ಆಕ್ಸಿಜನ್ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಳ್ಳಾರಿಯಿಂದ ಪೊಲೀಸ್ ಎಸ್ಕಾರ್ಟ್​ ಮೂಲಕ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಆಕ್ಸಿಜನ್​ ಪ್ಲಾಂಟ್​ಗೆ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಮೆಗ್ಗಾನ್​​​ ಕೋವಿಡ್ ಆಸ್ಪತ್ರೆಗೆ ಪ್ರತಿದಿನ ಎರಡು ಟ್ಯಾಂಕ್ ಆಕ್ಸಿಜನ್ ಬೇಕಾಗುತ್ತದೆ. ಆದರೆ ಈಗ ಎರಡು ದಿನಕ್ಕೊಮ್ಮೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಆದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ.

ಇದನ್ನೂ ಓದಿ:ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆಗೆ ಮಾರ್ಗಸೂಚಿ ರೂಪಿಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಹಾಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ರೀತಿಯಲ್ಲಿಯೂ ಆಕ್ಸಿಜನ್ ಪೂರೈಕೆಗೆ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಹೆಚ್ಚುವರಿ ಸೋಂಕಿತರನ್ನ ಸೇರಿಸಿಕೊಳ್ಳಲು ಆಕ್ಸಿಜನ್ ಕೊರತೆ ಇತ್ತು. ಹಾಗಾಗಿ ಇಂದು ಬಳ್ಳಾರಿಯಿಂದ ಒಂದು ಟ್ಯಾಂಕ್ ಆಕ್ಸಿಜನ್ ತರಿಸಿಕೊಳ್ಳಲಾಗಿದೆ. ಜಿಲ್ಲಾಡಳಿತ ಹಾಗೂ ಆತಂಕದಲ್ಲಿದ್ದ ಕೊರೊನಾ ಸೋಂಕಿತರು ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details