ಕರ್ನಾಟಕ

karnataka

ETV Bharat / city

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ.. ಆತಂಕ ಸೃಷ್ಟಿಸಿದ ಘಟನೆ - shivamogga meggaon hospital,

ಮೆಗ್ಗಾನ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಆಸ್ಪತ್ರೆ ಮುಂಭಾಗವೇ ಅಗ್ನಿಶಾಮಕ‌ದಳದ ಕಚೇರಿ‌ ಇರುವುದರಿಂದ ಸ್ಥಳಕ್ಕೆ ಅಗ್ನಿ‌ಶಾಮಕ ಸಿಬ್ಬಂದಿ ದೌಡಾಯಿಸಿ ಆಕ್ಸಿಜನ್ ಸೋರಿಕೆ ನಿಲ್ಲಿಸಿದ್ದಾರೆ.

oxygen-leak-at-meggan-hospital
ಮೆಗ್ಗಾನ್ ಆಸ್ಪತ್ರೆ

By

Published : Jun 7, 2021, 9:10 PM IST

ಶಿವಮೊಗ್ಗ: ಆಕ್ಸಿಜನ್ ಸೋರಿಕೆ ಉಂಟಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಆತಂಕ ಸೃಷ್ಟಿಸಿದ್ದ ಆಕ್ಸಿಜನ್ ಸೋರಿಕೆ ಘಟನೆ

ಜಿಲ್ಲಾಸ್ಪತ್ರೆ ಕಟ್ಟಡದ ಮೊದಲ ಮಹಡಿಯಲ್ಲಿ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಆಸ್ಪತ್ರೆ ಮುಂಭಾಗವೇ ಅಗ್ನಿಶಾಮಕ‌ದಳದ ಕಚೇರಿ‌ ಇರುವುದರಿಂದ ಸ್ಥಳಕ್ಕೆ ಅಗ್ನಿ‌ಶಾಮಕ ಸಿಬ್ಬಂದಿ ದೌಡಾಯಿಸಿ ಆಕ್ಸಿಜನ್ ಸೋರಿಕೆ ನಿಲ್ಲಿಸಿದ್ದಾರೆ.

ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಎಂಆರ್​ಐ ಸ್ಕ್ಯಾನಿಂಗ್​ ರೂಮ್​​ ಗೆ ಆಕ್ಸಿಜನ್​ ಸಿಲಿಂಡರ್​​​ ಸಮೇತ ರೋಗಿಯನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಸಿಲಿಂಡರ್​​ ಬಿದ್ದು ಆಮ್ಲಜನಕ ಸೋರಿಕೆಯಾಗಿದೆ. ಸ್ಕ್ಯಾನಿಂಗ್​ ರೂಮ್​ನ ಎಸಿ ಪೈಪ್​​ನಿಂದ ಆಮ್ಲಜನಕ ದಟ್ಟವಾಗಿ ಹೊರಗೆ ಒಂದಿದೆ. ಇದರಿಂದ ಕೆಲ ಕಾಲ ಆಸ್ಪತ್ರೆಯ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು.

ABOUT THE AUTHOR

...view details