ಶಿವಮೊಗ್ಗ :ಕಲ್ಲು ಒಡೆಯುವವರು, ಒಡೆದ ಕಲ್ಲು ಬಳಸಿ ದೇವಾಸ್ಥಾನ ಕಟ್ಟುವವರು ನೀವು. ಆದರೆ, ಆ ದೇವಾಸ್ಥಾನದ ಒಳಗಡೆ ಹೋಗುವವರೆ ಬೇರೆ. ಇದು ಬದಲಾಗಬೇಕು. ಏಕೆಂದರೆ, ಜಾತಿ ವ್ಯವಸ್ಥೆ ಹೋಗುವವರೆಗೆ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎನಿಸಿಕೊಳ್ಳುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜಿಲ್ಲಾ ಭೋವಿ (ವಡ್ಡರ) ಸಮಾಜವು ನಗದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಹಾಗೂ ಭೋವಿ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಭೋವಿ ಸಮಾಜದ ಬೃಹತ್ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿರುವುದು.. ನಮ್ಮದು ವೃತ್ತಿ ಆಧಾರಿತ ಜಾತಿ ವ್ಯವಸ್ಥೆ. ಕಲ್ಲಿನ ಕೆಲಸ ಮಾಡುವುದರಿಂದ ಭೋವಿ ಸಮಾಜವನ್ನು ಸ್ಥಳೀಯ ಭಾಷೆಯಲ್ಲಿ ವಡ್ಡರು ಎಂದು ಕರೆಯಲಾಗಿದೆ. ಈ ಜಾತಿ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಇದೆ. ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಅನೇಕ ಜನ ಶರಣರು, ಸೂಫಿ ಸಂತರು ಸಮಾಜ ಸುಧಾರಣೆ ಮಾಡಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆಯ ಸಾಧನೆ ಎಂಬುದು ಮರೀಚಿಕೆ ಎಂದರು.
ವಿದ್ಯಾವಂತರಾಗದ ಹೊರತು ಪ್ರಗತಿ ಅಸಾಧ್ಯ : ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ಮತ್ತು ಅತಿ ಶೂದ್ರ ವರ್ಗದ ಜನರು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತಗೊಂಡಿದ್ದರು. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಕಾಣಬಹುದಾಗಿದೆ. ಶಿಕ್ಷಣ ವಂಚಿತ ಜಾತಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಕಷ್ಟದ ಕೆಲಸ.
ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಅದೇ ಕಾರಣಕ್ಕೆ ಭೋವಿ ಸಮಾಜದ ಯುವಕರು ನೂರಕ್ಕೆ ನೂರರಷ್ಟು ವಿದ್ಯಾವಂತರಾಗಬೇಕಿದೆ. ವಿದ್ಯಾವಂತರಾಗದ ಹೊರತು ಭೋವಿ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು.
ಭೋವಿ ಭವನ ಉದ್ಘಾಟಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿ ಸಮಾಜ ತುಂಬಾ ಸ್ವಾವಲಂಬಿ ಸಮಾಜ. ಅದರಲ್ಲೂ ನಾವು ಸಾಮರಸ್ಯ ಹಾಗೂ ಸ್ವಾಭಿಮಾನದಿಂದ ಬದುಕುವ ಜನ. ಇತಿಹಾಸ ತೆಗೆದರೆ, ಇದು ಸತ್ಯವೇ ಆಗಿದೆ. ಇಂತಹ ಸಮಾಜ ಈಗ ಸರ್ಕಾರಗಳ ಕಟ್ಟುನಿಟ್ಟಿನ ಧೋರಣೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ.
ಕಲ್ಲು ಒಡೆಯುವ ಕಾಯಕಕ್ಕೆ ಅಡೆತಡೆ ಎದುರಾಗಿದೆ. ಶ್ರೀಮಂತರು ಗಣಿಗಾರಿಕೆ ಮಾಡುತ್ತಿದ್ದಾರೆ. ಕಲ್ಲು ಒಡೆಯುವುದನ್ನೇ ಕುಲ ಕಸುಬಾಗಿಸಿಕೊಂಡು ಬಂದ ಭೋವಿ ಸಮಾಜ ಕುಲಕಸುಬು ಇಲ್ಲದೆ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಭೋವಿ ಸಮಾಜದ ನೆರವಿಗೆ ಬರಬೇಕಿದೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಬಿ. ವೈ ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ ಅವರು, ನಂಬಿಕೆ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರು ಭೋವಿ ಸಮಾಜ. ಈ ಸಮಾಜದ ಕೊಡುಗೆಯಾಗಿಯೇ ನಾನು ಸಂಸದನಾಗಿರುವೆ. ಅವರ ಎಲ್ಲಾ ಬೇಡಿಕೆಗಳನ್ನು ತುಂಬಾ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುವೆ. ಏಕೆಂದರೆ, ಯಡಿಯೂರಪ್ಪ ಅವರ ಕೊಡುಗೆಯನ್ನು ಈ ಸಮಾಜ ಮರೆತಿಲ್ಲ. ಅದಕ್ಕೆ ನಾನು ಕೂಡ ಬದ್ದನಾಗಿರುವೆ ಎಂದರು.