ಕರ್ನಾಟಕ

karnataka

ಸಚಿವ ಸ್ಥಾನದಿಂದ ಅಶ್ವತ್ಥ ನಾರಾಯಣ ವಜಾಗೊಳಿಸಿ: ಎನ್‌ಎಸ್‌ಯುಐ ಆಗ್ರಹ

By

Published : May 6, 2022, 11:53 AM IST

ಕೂಡಲೇ ಮುಖ್ಯಮಂತ್ರಿಗಳು ಸಚಿವ ಅಶ್ವತ್ಥ ನಾರಾಯಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು-ಎನ್ಎಸ್​​ಯುಐ.

NSUI protest in Shivamogga
ಅಶ್ವತ್ಥ ನಾರಾಯಣ ವಿರುದ್ಧ ಎನ್‌ಎಸ್‌ಯುಐ ಪ್ರತಿಭಟನೆ

ಶಿವಮೊಗ್ಗ:ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಎನ್ಎಸ್‌ಯುಐ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಪಿಎಸ್ಐ ಸಮವಸ್ತ್ರ ಧರಿಸಿ, ನಕಲಿ ನೋಟುಗಳ ಹಾರ ಹಾಕಿಕೊಂಡು, ಸಚಿವ ಅಶ್ವತ್ಥ ನಾರಾಯಣರ ಮುಖವಾಡ ಧರಿಸಿ ಲಂಚ ಪಡೆಯುವ ಅಣಕು ಪ್ರದರ್ಶನ ಮಾಡಿದರು.


ರಾಜ್ಯ ಸರ್ಕಾರ ನಡೆಸಿದ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವರ ಸಂಬಂಧಿ ಭಾಗಿಯಾಗಿರುವುದರಿಂದ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಇದನ್ನೂ ಓದಿ:ಪಿಎಸ್ಐ ಅಕ್ರಮದಲ್ಲಿ ಅಶ್ವತ್ಥ್​ ನಾರಾಯಣ ಸಹೋದರ ಭಾಗಿ ಆರೋಪ : ಸಚಿವರ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ABOUT THE AUTHOR

...view details