ಕರ್ನಾಟಕ

karnataka

ETV Bharat / city

‘ರಾಮ ಮಂದಿರ ಏಕೆ ಬೇಡ?’.. ಸಾಗರ ಕೋರ್ಟ್​ಗೆ ಹಾಜರಾಗುವಂತೆ ಸಾಹಿತಿ ಭಗವಾನ್​ಗೆ ನೋಟಿಸ್! - ರಾಮಮಂದಿರ ಏಕೆ ಬೇಡ ಪುಸ್ತಕ

ರಾಮ ಮಂದಿರ ಏಕೆ ಬೇಡ? ಎಂಬ ಕೃತಿ ಬಿಡುಗಡೆ ಮಾಡಿರುವ ಸಾಹಿತಿ ಭಗವಾನ್​ಗೆ ಶಿವಮೊಗ್ಗ ನ್ಯಾಯಾಲಯದಿಂದ ಸಾಗರ ಕೋರ್ಟ್​ಗೆ ಹಾಜರಾಗುವಂತೆ ನೋಟೀಸ್​ ಜಾರಿ ಆಗಿದೆ.

Notice to Literature Bhagavan, Notice to Literature Bhagavan to appear in Sagar Court, Shivamogga news, Book of Why not Ram Mandir, Ram Mandir issue, ಸಾಹಿತಿ ಭಗವಾನ್‌ಗೆ ನೋಟಿಸ್, ಸಾಗರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಾಹಿತಿ ಭಗವಾನ್‌ಗೆ ನೋಟಿಸ್, ಶಿವಮೊಗ್ಗ ಸುದ್ದಿ, ರಾಮಮಂದಿರ ಏಕೆ ಬೇಡ ಪುಸ್ತಕ, ರಾಮ ಮಂದಿರ ಪುಸ್ತಕ ವಿವಾದ,
ಸಾಗರ ಕೋರ್ಟ್​ಗೆ ಹಾಜರಾಗುವಂತೆ ಸಾಹಿತಿ ಭಗವಾನ್​ಗೆ ನೋಟಿಸ್

By

Published : Jul 23, 2022, 3:49 PM IST

ಸಾಗರ, ಶಿವಮೊಗ್ಗ: ಸಾಹಿತಿ ಭಗವಾನ್​ಗೆ ಸಾಗರದ ಜೆಎಂಎಫ್​ಸಿ ನ್ಯಾಯಾಲಯದಿಂದ ಕೋರ್ಟ್​ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಭಗವಾನ್ ಅವರು ರಾಮ ಮಂದಿರ ಏಕೆ ಬೇಡ ಎನ್ನುವ ಕೃತಿಯನ್ನು ಬಿಡುಗಡೆ ಮಾಡಿದ್ದರು. ಈ ಕೃತಿಯು ವಿವಾದಾತ್ಮಕವಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಸಾಗರದ ಮಹಾಬಲೇಶ್ವರ್​ ಎಂಬುವರು ಕೋರ್ಟ್​ಗೆ ದೂರು ದಾಖಲಿಸಿದ್ದರು. ಇದು ಐಪಿಸಿ ಸೆಕ್ಷನ್ 295(a) ಅಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ದೂರಿನ‌ ವಿಚಾರಣೆ ನಡೆಸಿದ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಸಾಗರ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಶೈಲ ಭೀಮಸೇನ್ ಭಗಾಡೆ ಅವರು ಬರಹಗಾರ ಭಗವಾನ್ ಸಾಗರದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಖುದ್ದು ಆಗಸ್ಟ್​ 30ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು.

ಈ ಪ್ರಕರಣದ ವಾದವನ್ನು ದೂರದಾರರ ಪರವಾಗಿ ಕೆ.ವಿ.ಪ್ರವೀಣ ಕುಮಾರ್ ಮಂಡಿಸುತ್ತಿದ್ದಾರೆ. ಇವರು ಈ ಹಿಂದೆ ಸಾಗರ ಕೋರ್ಟ್​ನಲ್ಲಿ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.

ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನ್ಯಾಯಾಲಯಕ್ಕೆ ಹಾಜರಾದ ಭಗವಾನ್, ಚಂಪಾ ಗೈರು

ABOUT THE AUTHOR

...view details