ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿನ ಕೊರೊನಾ ಸೋಂಕಿತರಿಗೆ ಇನ್ನೂ ಮುಂದೆ ಹೋಂ ಐಸೋಲೇಷನ್ ಇರುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲೂ ಹೋಂ ಐಸೋಲೇಷನ್ ಇಲ್ಲ: ಸಚಿವ ಈಶ್ವರಪ್ಪ - ಹೋಮ್ ಐಸೋಲೇಷನ್ ನಿಷೇಧ
ಕೊರೊನಾ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದರಿಂದ ಅವರ ಮನೆಯವರಿಗೆಲ್ಲಾ ಸೋಂಕು ಹರಡುತ್ತಿದೆ. ಇದರಿಂದ ಹೋಂ ಐಸೋಲೇಷನ್ ಸ್ಥಗಿತಗೊಳಿಸಲಾಗಿದೆ. ಕೋವಿಡ್ ಕೇರ್ ಸೆಂಟರಿನಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
![ಗ್ರಾಮೀಣ ಭಾಗದಲ್ಲೂ ಹೋಂ ಐಸೋಲೇಷನ್ ಇಲ್ಲ: ಸಚಿವ ಈಶ್ವರಪ್ಪ no home home isolation in village](https://etvbharatimages.akamaized.net/etvbharat/prod-images/768-512-11867636-thumbnail-3x2-dkdk.jpg)
ಸಚಿವ ಈಶ್ವರಪ್ಪ
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದರಿಂದ ಅವರ ಮನೆಯವರಿಗೆಲ್ಲಾ ಸೋಂಕು ಹರಡುತ್ತಿದೆ. ಇದರಿಂದ ಹೋಂ ಐಸೋಲೇಷನ್ ಸ್ಥಗಿತಗೊಳಿಸಲಾಗಿದೆ. ಕೋವಿಡ್ ಕೇರ್ ಸೆಂಟರಿನಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲೂ ಹೋಂ ಐಸೋಲೇಷನ್ ಇಲ್ಲ
ಈಗಾಗಲೇ ವಲಸೆ ಹೋಗಿದ್ದ ಜನರು ಹಳ್ಳಿಗಳಿಗೆ ವಾಪಸ್ ಬರುತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚಾಗುತ್ತಿದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಳಸಿಕೊಂಡು ಸ್ಥಳೀಯ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ ಸೋಂಕು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.