ಶಿವಮೊಗ್ಗ: ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಪ್ರಾಣಿ ನೀಲ್ಗಾಯ್ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಮೂರು ದಿನದ ಹಿಂದೆಯೇ ಸಾವನ್ನಪ್ಪಿದೆ ಎಂದು ಸಿಂಹಧಾಮದ ಮೂಲಗಳು ತಿಳಿಸಿವೆ.
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಅಪರೂಪದ ಪ್ರಾಣಿ ನೀಲ್ಗಾಯ್ ಸಾವು - ನೀಲ್ಗಾಯ್ ಸಾವು
ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ನೀಲ್ಗಾಯ್ ಹಾಗೂ ಜಿಂಕೆಯನ್ನು ಬೇರ್ಪಡಿಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ನೀಲ್ಗಾಯ್ವೊಂದು ಮೃತಪಟ್ಟಿದೆ ಎಂದು ಸಿಂಹಧಾಮದ ಮೂಲಗಳು ತಿಳಿಸಿವೆ.
ನೀಲ್ಗಾಯ್ಗಳು ಹಾಗೂ ಜಿಂಕೆಗಳನ್ನು ಒಂದೇ ಕಡೆ ಇಡಲಾಗಿತ್ತು. ಹಾಲಿ ಸಿಂಹಧಾಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ನೀಲ್ಗಾಯ್ ಹಾಗೂ ಜಿಂಕೆಯನ್ನು ಬೇರ್ಪಡಿಸಲಾಗುತ್ತಿದೆ. ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ನೀಲ್ಗಾಯ್ ಮೃತಪಟ್ಟಿದೆ ಎಂದು ಹುಲಿ ಮತ್ತು ಸಿಂಹಧಾಮದ ಮೂಲಗಳು ತಿಳಿಸಿವೆ.
ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮವು ಕೇಂದ್ರ ಮೃಗಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು, ನೀಲ್ಗಾಯ್ಗಳನ್ನು ಗೇಜ್ನಲ್ಲಿ ಹಾಕಿ ಸ್ಥಳಾಂತರ ಮಾಡುವಾಗ ಬೇರೆ ನೀಲ್ಗಾಯ್ಗಳು ಸಾಯಿಸಿರಬಹುದೆಂದು ಅಂದಾಜಿಸಲಾಗಿದೆ. ಒಟ್ಟು 19 ನೀಲ್ಗಾಯ್ಗಳನ್ನು ಮೈಸೂರು ಮೃಗಾಲಯದಿಂದ ತರಲಾಗಿತ್ತು. ಇದರಲ್ಲೀಗ ಒಂದು ಮೃತಪಟ್ಟಿರುವ ಕಾರಣ ಸದ್ಯಕ್ಕೆ18 ನೀಲ್ಗಾಯ್ಗಳಿವೆ.