ಕರ್ನಾಟಕ

karnataka

ETV Bharat / city

ಶಿವಮೊಗ್ಗ: ಹಿಜಾಬ್ ತೆಗೆಯಲ್ಲ ಎಂದು ಶಾಲೆ ಮುಂದೆಯೇ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರು - ಶಿರಾಳಕೊಪ್ಪದ ಶಾಲೆಯ ಮುಂದೆ ಹಿಜಾಬ್​ಗಾಗಿ ಪ್ರತಿಭಟನೆ

ಹಿಜಾಬ್ ತೆಗೆಯಲ್ಲ.. ಇದು ನಮ್ಮ ಧರ್ಮದ ಆಚರಣೆ.. ನಮಗೆ ಹಿಜಾಬ್ ಬೇಕು.. ಶಿಕ್ಷಣವೂ ಬೇಕು ಎಂದು ಶಾಲಾ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಇಂದು ನಡೆದಿದೆ.

protest
ಪ್ರತಿಭಟನೆ

By

Published : Feb 15, 2022, 3:37 PM IST

Updated : Feb 15, 2022, 7:42 PM IST

ಶಿವಮೊಗ್ಗ:ಹಿಜಾಬ್ ತೆಗೆಯಲ್ಲ.. ಇದು ನಮ್ಮ ಧರ್ಮದ ಆಚರಣೆ.. ನಮಗೆ ಹಿಜಾಬ್ ಬೇಕು.. ಶಿಕ್ಷಣವೂ ಬೇಕು ಎಂದು ಶಾಲಾ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಇಂದು ನಡೆದಿದೆ.

ಶಿರಾಳಕೊಪ್ಪದ ಆರ್ ಎಂ ಎಸ್ ಶಾಲೆ ಮತ್ತು ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ ಹಿಜಾಬ್​ಗಾಗಿ ಪ್ರತಿಭಟನೆ ನಡೆಸಲಾಗಿದೆ. ಹಿಜಾಬ್ ತೆಗೆಯುವುದಿಲ್ಲ ಎಂದು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮನೆಗೆ ವಾಪಸ್ ಆಗಿದ್ದಾರೆ. ಅದೇ ರೀತಿ ಶಿರಾಳಕೊಪ್ಪದ ಅಲಮೀನ್ ಶಾಲೆಯಲ್ಲೂ ಸಹ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಹಿಜಾಬ್ ತೆಗೆಯಲ್ಲ ಎಂದು ಶಾಲೆ ಮುಂದೆಯೇ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರು

ಪ್ರತಿಭಟನಾನಿರತ ವಿದ್ಯಾರ್ಥಿಗಳು ತಾವು ಶಾಲೆಯೊಳಗೂ ಹೋಗಲ್ಲ, ಮನೆಗೂ ತೆರಳಲ್ಲ ಶಾಲಾ ಆವರಣದಲ್ಲಿಯೇ ಘೋಷಣೆ ಕೂಗುತ್ತಾ ನಿಂತಿದ್ದರು. ನಾವು ಶಾಲೆಯ ಸಮವಸ್ತ್ರವನ್ನೇ ಧರಿಸಿಕೊಂಡು ಬಂದಿದ್ದೇವೆ. ಮೊದಲಿನಿಂದಲೂ ಶಾಲೆಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೇವೆ. ಮುಂದೆಯೂ ಹಾಗೆಯೇ ಬರ್ತೀವಿ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ ಎಂದು ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾನಿರತ ಶಾಲಾ ಮಕ್ಕಳನ್ನು ಕೋರ್ಟ್​ ಆದೇಶ ಪಾಲನೆ ಮಾಡಬೇಕು ಎಂದು ತಿಳಿ ಹೇಳಿದ ಶಾಲಾ ಶಿಕ್ಷಕರು ಹಾಗೂ ಪೊಲೀಸರು ಮನವೊಲಿಸಲು ಪ್ರಯತ್ನ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಓದಿ:ಟೀಚರ್ ಗಳೂ ಹಿಜಾಬ್ ಹಾಕುವಂತಿಲ್ಲ, ಮಕ್ಕಳಿಗೆ ಇರುವುದು ಟೀಚರ್‌ಗೂ ಅನ್ವಯ : ರಘುಪತಿ ಭಟ್

Last Updated : Feb 15, 2022, 7:42 PM IST

For All Latest Updates

TAGGED:

ABOUT THE AUTHOR

...view details