ಶಿವಮೊಗ್ಗ: ನಗರದ ಹೊರ ವಲಯದಲ್ಲಿರುವ ಕಲ್ಲೂರು- ಮಂಡ್ಲಿಯ ಕೈಗಾರಿಕಾ ವಸಾಹತು ಪ್ರದೇಶದ ಎದುರಿನ ಖಾಲಿ ಲೇಔಟ್ನಲ್ಲಿ ಸೈಯದ್ ಸಾಧಿಕ್ (32) ಎಂಬಾತನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಸೈಯದ್ ಸಾಧಿಕ್ರನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರಬಹುದು. ರಿಯಲ್ ಎಸ್ಟೇಟ್ ಹಣ ಹಂಚಿಕೆಯ ಕುರಿತು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.