ಶಿವಮೊಗ್ಗ:ಸಾಗರದ ಉಪ ಅರಣ್ಯಾಧಿಕಾರಿ ಕಚೇರಿಯ ಉಗ್ರಾಣ ಕಾವಲುಗಾರನ ಕೊಲೆ, ಶ್ರೀಗಂಧ ಕಳುವು ಪ್ರಕರಣವನ್ನು ಸಾಗರ ಪೊಲೀಸರು ಭೇದಿಸಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ.7 ರಂದು ಸಾಗರದ ವಿನೋಬನಗರದ ಉಪ ಅರಣ್ಯಾಧಿಕಾರಿ ಕಚೇರಿ ಆವರಣದ ಉಗ್ರಾಣದ ಕಾವಲುಗಾರ ನಾಗರಾಜ್ ಎಂಬುವವರನ್ನು ಕೊಲೆ ಮಾಡಿ, 100 ಕೆ.ಜಿ. ಶ್ರೀಗಂಧವನ್ನು ಕದ್ದುಕೊಂಡು ಹೋಗಲಾಗಿತ್ತು. ಅಲ್ಲದೆ ಕಾವಲುಗಾರನ ಶವನನ್ನು ನಗರದ ನೇದರಹಳ್ಳಿಯ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿದ್ದರು.
ಸಾಗರ ಅರಣ್ಯ ಕಾವಲುಗಾರನ ಕೊಲೆ, ಕಳ್ಳತನ ಪ್ರಕರಣ ಈ ಕುರಿತು ತನಿಖೆ ನಡೆಸಿದ ಸಾಗರ ಟೌನ್ ಪೊಲೀಸರು, ಅಂತರರಾಜ್ಯ ಕಳ್ಳರು ಸೇರಿದಂತೆ ಬೆಂಗಳೂರು, ಮೈಸೂರು ಮೂಲದ ಅಬ್ದುಲ್ ಬಜ್ಜಾರ್(53) ಹಾಗೂ ಸದ್ದಾಂ(25), ತಮಿಳುನಾಡಿನ ಜಯಕುಮಾರ್(37), ಬೆಂಗಳೂರಿನ ಸಯ್ಯದ್(36) ಮತ್ತು ಮಹಮ್ಮದ್ ಇಮ್ರಾನ್(30) ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧ, ಎರಡು ಇನ್ನೋವಾ ಕಾರು, ಒಂದು ಕ್ವಾಲೀಸ್ ಕಾರು ಸೇರಿದಂತೆ 62 ಕೆ. ಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.