ಶಿವಮೊಗ್ಗ: ಕ್ರೇಜಿಸ್ಟಾರ್ ರವಿಚಂದ್ರನ್(ravichandran) ಪುತ್ರ ಮನುರಂಜನ್ ರವಿಚಂದ್ರನ್(manuranjan ravichandran) ಅಭಿನಯದ ಬಹುನಿರೀಕ್ಷಿತ "ಮುಗಿಲ್ ಪೇಟೆ"(mugilpete film) ಚಿತ್ರ ನವೆಂಬರ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದ ನಟ ಮನುರಂಜನ್, ಈ ಚಿತ್ರವು ನನ್ನ ಪಾಲಿಗೆ ಬಹು ನಿರೀಕ್ಷೆಯ ಚಿತ್ರವಾಗಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ಸಿಕ್ಕಿದೆ. ಇದೊಂದು ಇಡೀ ಕುಟುಂಬ ಕುಳಿತು ನೋಡಬಹುದಾದ ಚಿತ್ರವಾಗಿದೆ. ಇಂಪಾದ ಹಾಡುಗಳು, ಸೊಗಸಾದ ಹೊರಾಂಗಣ ಚಿತ್ರೀಕರಣ, ನವಿರಾದ ಪ್ರೇಮವನ್ನು ಒಳಗೊಂಡ ಚಿತ್ರವಾಗಿದೆ. ಒಟ್ಟಾರೆ, ಇದು ಒಂದು ಉತ್ತಮ ಕೌಟುಂಬಿಕ ಚಿತ್ರವಾಗಿದ್ದು, ಚಿತ್ರ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನ್ನದು ಎಂದರು.
ಭರತ್ ಎಸ್. ನಾವುಂದ ಈ ಚಿತ್ರ ನಿರ್ದೇಶಿಸಿದ್ದಾರೆ. "ಮುಗಿಲ್ ಪೇಟೆ" ಇಡೀ ಚಿತ್ರತಂಡದ ಶ್ರಮದ ಫಲವಾಗಿ ಇಂದು ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. 90 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ ಎಂದರು.
ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬ