ಕರ್ನಾಟಕ

karnataka

ETV Bharat / city

'ಕೇಂದ್ರ ಸಚಿವ ಸ್ಥಾನದ ಬಗ್ಗೆ ತಿಳಿದಿಲ್ಲ, ಹಾನಗಲ್​ನಲ್ಲಿ ವಿಜಯೇಂದ್ರ ಸ್ಪರ್ಧೆ ತೀರ್ಮಾನವಾಗಿಲ್ಲ' - ಹಾನಗಲ್​ನಲ್ಲಿ ವಿಜಯೇಂದ್ರ ಸ್ಪರ್ಧೆ

ಕೇಂದ್ರ ಸಚಿವ ಸ್ಥಾನದ ಬಗ್ಗೆ ನನಗೆ ತಿಳಿದಿಲ್ಲ. ಹಾನಗಲ್​ನಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಕುರಿತು ಸಂಘಟನೆ ಹಾಗೂ ವಿಜಯೇಂದ್ರ ಸಹ ಯೋಚನೆ ಮಾಡಿಲ್ಲ ಎಂದು ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.

shivamogga
ಬಿ.ವೈ.ರಾಘವೇಂದ್ರ

By

Published : Jun 28, 2021, 1:55 PM IST

ಶಿವಮೊಗ್ಗ: ಕೇಂದ್ರ ಸಚಿವ ಸ್ಥಾನಕ್ಕೆ ಹೆಸರು ಕೇಳಿ ಬರುತ್ತಿರುವ ಬಗ್ಗೆ ನನಗೇನೂ ತಿಳಿದಿಲ್ಲ. ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಕೇಂದ್ರ ಸಚಿವ ಸ್ಥಾನ ಕುರಿತು ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ

ಇನ್ನು, ಹಾನಗಲ್​ನಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಕುರಿತು ಸಂಘಟನೆ ಹಾಗೂ ವಿಜಯೇಂದ್ರ ಸಹ ಯೋಚನೆ ಮಾಡಿಲ್ಲ. ವಿಜಯೇಂದ್ರ ಹಾನಗಲ್​ನಲ್ಲಿ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ ಒತ್ತಡ ಇರುವುದು ಸಹಜ. ಆದರೆ, ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದರು.

'ರಾಗಿಗುಡ್ಡಕ್ಕೆ ಹಾನಿ ಮಾಡಿಲ್ಲ'

ಶಿವಮೊಗ್ಗದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಇಸಿಎಸ್ಐ ಆಸ್ಪತ್ರೆಗಾಗಿ ರಾಗಿಗುಡ್ಡಕ್ಕೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಐದು ಎಕರೆ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯ ಸುತ್ತ ಆ್ಯಂಬುಲೆನ್ಸ್​ ಸುತ್ತಾಟಕ್ಕೆ ಸ್ಪಲ್ಪ ಭಾಗ ಮಾತ್ರ ಮಣ್ಣು ತೆಗೆಯಲಾಗಿದೆ. ಅದನ್ನು ಬಿಟ್ಟರೆ ಬೇರೆ ಹಾನಿಯಾಗಿಲ್ಲ. ಇಲ್ಲಿ ತೆಗೆದ ಮಣ್ಣನ್ನು ವಾಜಪೇಯಿ ಬಡಾವಣೆಯಲ್ಲಿ ಕೆರೆ ಅಭಿವೃದ್ದಿಗೆ ನೀಡಲಾಗಿದೆಯೇ ಹೊರತು, ಯಾವುದೇ ಖಾಸಗಿ ಲೇಔಟ್​​ಗೆ ನೀಡಿಲ್ಲ ಎಂದರು.

ಇದನ್ನೂ ಓದಿ:ರೇಖಾ ಕದಿರೇಶ್ ಹತ್ಯೆ‌ ಕೇಸ್: ರೌಡಿ ಆತುಷ್ ವಿಚಾರಣೆಗೆ ಆಗ್ರಹಿಸಿ ಕಮಿಷನರ್​ಗೆ ದೂರು

ABOUT THE AUTHOR

...view details