ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಳಕೆಯಲ್ಲಿ (grants use ) ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ (MP BY Raghavendra) ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಿ.ವೈ ರಾಘವೇಂದ್ರ ಅವರು ತಮ್ಮ ಸಂಸದರ ನಿಧಿಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಅನುಷ್ಠಾನಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರ ನಿಧಿ ಬಳಕೆಯಲ್ಲಿ ದೇಶಕ್ಕೆ 2ನೇ ಸ್ಥಾನದಲ್ಲಿದ್ದಾರೆ.
2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ ಅನುದಾನ ಹಾಗೂ 10 ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೇ ಇದ್ದ 4.40 ಕೋಟಿ ರೂ ಅನುದಾನ ಸೇರಿದಂತೆ 9.40 ಕೋಟಿ ರೂ.ಗಳಲ್ಲಿ ಈಗಾಗಲೇ 9 ಕೋಟಿ ರೂ ಬಳಕೆ ಮಾಡಿದ್ದಾರೆ.
ಅನುದಾನ ಬಳಕೆ ವಿವರ:
- ಸಾರ್ವಜನಿಕ ಬಸ್ ಶೆಲ್ಟರ್ ಗಳು, ಹೈಮಾಸ್ಟ್ ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನಕ್ಕೆ 4.70 ಕೋಟಿ ರೂ. ನೀಡಿದ್ದಾರೆ.
- ರಸ್ತೆ ನಿರ್ಮಾಣಕ್ಕೆ 2.93 ಕೋಟಿ ರೂ ಅನುದಾನ
- ಕೊರೊನಾ ನಿರ್ವಹಣೆಗೆ, ಆರೋಗ್ಯ ಇಲಾಖೆಗೆ ಆ್ಯಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರ ಅಳವಡಿಕೆಗೆ 8.50 ಲಕ್ಷ ರೂ.
- ಕುಡಿಯುವ ನೀರಿನ ಘಟಕಕ್ಕೆ 42 ಲಕ್ಷ ರೂ. ಹಾಗು ಅಂಗವಿಕಲರಿಗೆ ತ್ರಿಚಕ್ರ ವಾಹನ ಹೀಗೆ ಅನೇಕ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಅನುದಾನ ಬಳಕೆ ಮಾಡಿದ್ದಾರೆ.
2 ಕೋಟಿ ರೂ. ಅನುದಾನ ಬಿಡುಗಡೆ:
ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21 ಹಾಗೂ 2021-22ರ ಎರಡು ವರ್ಷಗಳ ಸಂಸದರ ನಿಧಿಯನ್ನು ಕೋವಿಡ್ ಸಂಕಷ್ಟದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈ ಗೊಂಡಿದ್ದು, 2021-22ನೇ ಸಾಲಿನಲ್ಲಿ ಸ್ಥಗಿತಗೊಂಡಿದ್ದ ಸಂಸದರ ನಿಧಿಯಲ್ಲಿ 2 ಕೋಟಿ ರೂ. ಬಿಡುಗಡೆ ಮಾಡಿದೆ.
ಹೀಗಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (MP BY Raghavendra) ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:'ಕಾನೂನುಗಳನ್ನು ಜಾರಿಗೊಳಿಸದಿದ್ದರೆ, ಅವುಗಳ ಉದ್ದೇಶ ಈಡೇರುವುದಿಲ್ಲ': ಅಜಿತ್ ದೋವಲ್