ಶಿವಮೊಗ್ಗ: ವಾರದಲ್ಲಿ ಎರಡು ದಿನ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈ ಸಂಪರ್ಕಿಸುವ ಹೊಸ ರೈಲಿಗೆ ಸಂಸದ ಬಿ.ವೈ ರಾಘವೇಂದ್ರ ನಿನ್ನೆ(ಭಾನುವಾರ) ನಗರದ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಜನರ ಬಹು ದಿನದ ಕನಸು ನನಸಾಗಿದೆ. ಶಿವಮೊಗ್ಗದಿಂದ ತಿರುಪತಿಗೆ ಹೋಗಲು ಇದು ಪ್ರಯೋಜನವಾಗಲಿದೆ. ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವುದರಿಂದ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ-ತಿರುಪತಿ-ಚೆನ್ನೈ ಸಂಪರ್ಕಿಸುವ ಹೊಸ ರೈಲಿಗೆ ಸಂಸದ ಬಿ.ವೈ.ರಾಘವೇಂದ್ರ ಹಸಿರು ನಿಶಾನೆ
ವಾರದಲ್ಲಿ ಎರಡು ದಿನ ಹೊರಡುವ ಶಿವಮೊಗ್ಗ-ತಿರುಪತಿ-ಚೆನ್ನೈ ವಿಶೇಷ ರೈಲಿನ ಉದ್ಘಾಟನಾ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸಿದರು.
ಶಿವಮೊಗ್ಗ-ತಿರುಪತಿ-ಚೆನ್ನೈ ರೈಲಿಗೆ ಹಸಿರು ನಿಶಾನೆ
ಶಿಕಾರಿಪುರ, ರಾಣೆಬೆನ್ನೂರು ರೈಲ್ವೆ ಹೊಸ ಮಾರ್ಗ ಟೆಂಡರ್ ಮುಂದಿನ ತಿಂಗಳಲ್ಲಿ ಆಗಲಿದೆ. ಈಗಾಗಲೇ ಶೇ. 60ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ವಾರದಲ್ಲಿ ಎರಡು ದಿನಗಳ ಕಾಲ ಈ ರೈಲು ಸಂಚರಿಸಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಎರಡು ವರ್ಷದ ಮಗನ ಎದುರೇ ಮಹಿಳೆ ಮೇಲೆ ರೈಲು ನಿಲ್ದಾಣದಲ್ಲಿ ಗ್ಯಾಂಗ್ ರೇಪ್!